Select Your Language

Notifications

webdunia
webdunia
webdunia
Monday, 14 April 2025
webdunia

ರಣಜಿ ಟ್ರೋಫಿ ಕ್ರಿಕೆಟ್: ದುರ್ಬಲರೆದುರು ವಿಫಲರಾದ ಕರ್ನಾಟಕ ಕ್ರಿಕೆಟಿಗರು

ರಣಜಿ ಟ್ರೋಫಿ ಕ್ರಿಕೆಟ್
ಶಿವಮೊಗ್ಗ , ಶನಿವಾರ, 22 ಡಿಸೆಂಬರ್ 2018 (17:39 IST)
ಶಿವಮೊಗ್ಗ: ರೈಲ್ವೇಸ್ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನದಂತ್ಯಕ್ಕೆ ಪ್ರಥಮ ಇನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ.


ದುರ್ಬಲ ತಂಡವೆಂಬ ಹಣೆಪಟ್ಟಿ ಹೊಂದಿದ್ದ ರೈಲ್ವೇಸ್ ಕರ್ನಾಟಕವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕ ಪರ ದೇಗಾ ನಿಶ್ವಲ್ 52 ಮತ್ತು ಕೆ ಸಿದ್ಧಾರ್ಥ್ 69 ರನ್ ಗಳಿಸಿದ್ದೇ ಗರಿಷ್ಠ ಸಾಧನೆ. ದೇವದತ್ತ ಪಡಿಕ್ಕಲ್, ಮನೀಶ್ ಪಾಂಡೆ ಕ್ರಮವಾಗಿ 1 ಮತ್ತು 4 ರನ್ ಗಳಿಸಿ ಔಟಾಗಿದ್ದು ಕರ್ನಾಟಕಕ್ಕೆ ಭಾರೀ ಹೊಡೆತ ನೀಡಿತು.

ದಿನದಂತ್ಯಕ್ಕೆ ಕರ್ನಾಟಕ ಪರ ಶ್ರೀನಿವಾಸ್ ಶರತ್ 28 ಮತ್ತು ಪ್ರಸಿದ್ಧ್ ಕೃಷ್ಣ 2 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮದೇ ಬ್ಯಾಟಿಂಗ್ ಟಿವಿಯಲ್ಲಿ ಬಂದರೆ ರಾಹುಲ್ ದ್ರಾವಿಡ್ ಏನು ಮಾಡ್ತಾರೆ ಗೊತ್ತಾ?