Publish Date: Sat, 22 Dec 2018 (10:37 IST)
Updated Date: Sat, 22 Dec 2018 (10:38 IST)
ಬೆಂಗಳೂರು: ರಾಹುಲ್ ದ್ರಾವಿಡ್ ಬ್ಯಾಟಿಂಗ್ ನ್ನು ಟಿವಿಯಲ್ಲಿ ಬಂದರೆ ನಾವು ಈಗಲೂ ಈಗ ನಡೆಯುತ್ತಿರುವ ಪಂದ್ಯದಷ್ಟೇ ಆಸಕ್ತಿಯಿಂದ ನೋಡುತ್ತೇವೆ. ಆದರೆ ಸ್ವತಃ ದ್ರಾವಿಡ್ ಏನು ಮಾಡುತ್ತಾರೆ ಗೊತ್ತಾ?
ವಿವಿಎಸ್ ಲಕ್ಷ್ಮಣ್ ಆತ್ಮಕತೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿರುವ ದ್ರಾವಿಡ್, ತಾನು ಈಗಲೂ ಟಿವಿಯಲ್ಲಿ ತನ್ನ ಬ್ಯಾಟಿಂಗ್ ದೃಶ್ಯಗಳು ಬರುವಾಗ ನೋಡಲು ಇಷ್ಟಪಡಲ್ಲ. ಚಾನೆಲ್ ಬದಲಾಯಿಸುತ್ತೇನೆ ಎಂದಿದ್ದಾರೆ.
ಆದರೆ ದ್ರಾವಿಡ್ ಒಂದು ಪಂದ್ಯವನ್ನು ಮಾತ್ರ ಮಿಸ್ ಮಾಡದೇ ನೋಡುತ್ತಾರಂತೆ. ಅದು 2001 ರ ಕೋಲ್ಕೊತ್ತಾ ಟೆಸ್ಟ್ ಪಂದ್ಯ. ಆ ಪಂದ್ಯ ಭಾರತೀಯ ಕ್ರಿಕೆಟ್ ನ ಇತಿಹಾಸವನ್ನೇ ಬದಲಾಯಿಸಿದ ಪಂದ್ಯ. ಆವತ್ತು ವಿವಿಎಸ್ ಲಕ್ಷ್ಮಣ್ 281 ರನ್ ಹೊಡೆದು ಫಾಲೋ ಆನ್ ನಲ್ಲಿ ಭಾರತವನ್ನು ಗೆಲುವಿನತ್ತ ಮುಟ್ಟಿಸಿದ್ದರು. ಈ ಪಂದ್ಯದಲ್ಲಿ ಲಕ್ಷ್ಮಣ್ ಜತೆಗೆ ಬ್ಯಾಟ್ ಮಾಡಿದ್ದು ದ್ರಾವಿಡ್. ಆ ಪಂದ್ಯದ ಇನಿಂಗ್ಸ್ ಟಿವಿಯಲ್ಲಿ ಬಂದರೆ ಮಾತ್ರ ಇಂದಿಗೂ ದ್ರಾವಿಡ್ ಮಿಸ್ ಮಾಡದೇ ನೋಡುತ್ತಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ