Publish Date: Thu, 29 Nov 2018 (17:20 IST)
Updated Date: Thu, 29 Nov 2018 (17:21 IST)
ಮೈಸೂರು: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಗೆಲುವಿನ ಉತ್ಸಾಹದಲ್ಲಿ ಕರ್ನಾಟಕ ಪಡೆಯಿದೆ.
ದ್ವಿತೀಯ ದಿನವಾದ ಇಂದು ಮಹಾರಾಷ್ಟ್ರ ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿದೆ. ಇದರೊಂದಿಗೆ 25 ರನ್ ಗಳ ಹಿನ್ನಡೆಯಲ್ಲಿದೆ. ಮೊದಲ ಇನಿಂಗ್ಸ್ ನಲ್ಲಿ ಮಹಾರಾಷ್ಟ್ರ 113 ರನ್ ಗಳಿಗೆ ಆಲೌಟ್ ಆದರೆ ಕರ್ನಾಟಕ 186 ರನ್ ಗಳಿಸಿತ್ತು. ಈ ಮೂಲಕ ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ನಲ್ಲಿ 73 ರನ್ ಗಳ ಮುನ್ನಡೆ ಸಿಕ್ಕಿತ್ತು.
ಕರ್ನಾಟಕ ಪರ ಮೊದಲ ಇನಿಂಗ್ಸ್ ನಲ್ಲಿ ದೇಗಾ ನಿಶ್ಚಲ್ 39 ರನ್ ಮತ್ತು ಶ್ರೇಯಸ್ ಗೋಪಾಲ್ 40 ರನ್ ಗಳಿಸಿದರು. ಇದೀಗ ಎರಡು ದಿನಗಳ ಪಂದ್ಯ ಬಾಕಿಯಿದ್ದು ಮಹಾರಾಷ್ಟ್ರವನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಬೇಗನೇ ಆಲೌಟ್ ಮಾಡಿದರೆ ಕರ್ನಾಟಕಕ್ಕೆ ಗೆಲುವಿನ ಅವಕಾಶ ಹೆಚ್ಚಿದೆ.