Publish Date: Tue, 28 Nov 2017 (16:27 IST)
Updated Date: Tue, 28 Nov 2017 (16:31 IST)
ದೆಹಲಿ: ಅಂತಿಮ ದಿನ ಇನ್ನೂ ಅರ್ಧ ದಿನವಷ್ಟೆ ಪಂದ್ಯ ಬಾಕಿಯಿದೆ ಎನ್ನುವಾಗ ಡ್ರಾ ಮಾಡಿಕೊಳ್ಳುವುದು ಕಷ್ಟವಲ್ಲ. ಆದರೆ ರೈಲ್ವೇಸ್ ವಿರುದ್ಧ ಕರ್ನಾಟಕ ಗೆಲುವು ಸಾಧಿಸಿಯೇಬಿಟ್ಟಿದೆ.
ಗೆಲುವಿಗೆ 377 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ರೈಲ್ವೇಸ್ ಇಂದು ಭೋಜನ ವಿರಾಮದ ವೇಳೆಗೂ ಕೇವಲ 1 ವಿಕೆಟ್ ಕಳೆದುಕೊಂಡು 22 ರನ್ ಗಳಿಸಿತ್ತು. ಜಿಗುಟಿನ ಆಟ ಆಡಿದ್ದರೆ ಪಂದ್ಯ ಡ್ರಾ ಮಾಡಿಕೊಳ್ಳಬಹುದಿತ್ತು.
ಆದರೆ ಕರ್ನಾಟಕದ ಹುಡುಗರು ಅದಕ್ಕೆ ಆಸ್ಪದ ಕೊಡಲಿಲ್ಲ. ಅದರಲ್ಲೂ ವಿಶೇಷವಾಗಿ ಕೆ ಗೌತಮ್ 7 ವಿಕೆಟ್ ಕಿತ್ತು ಅಬ್ಬರಿಸಿದರು. ಇವರಿಗೆ ಶ್ರೇಯಸ್ ಗೋಪಾಲ್ 2 ಮತ್ತು ಅಭಿಮನ್ಯು ಮಿಥುನ್ 1 ವಿಕೆಟ್ ಕಿತ್ತು ತಂಡಕ್ಕೆ ನಂಬಲಸಾಧ್ಯ ಗೆಲುವು ತಂದಿತ್ತರು. ಇವರ ಮಾರಕ ದಾಳಿಗೆ ತತ್ತರಿಸಿದ ರೈಲ್ವೇಸ್ 167 ರನ್ ಗಳಿಗೆ ಆಲೌಟ್ ಆಯಿತು. ಕರ್ನಾಟಕಕ್ಕೆ ಕೊನೆಯ ಲೀಗ್ ಪಂದ್ಯದಲ್ಲಿ 209 ರನ್ ಗಳ ಭರ್ಜರಿ ಜಯ ಸಿಕ್ಕಿತ್ತು. ಎರಡೂ ಇನಿಂಗ್ಸ್ ನಲ್ಲಿ ಶತಕ ಭಾರಿಸಿದ್ದ ಮಯಾಂಕ್ ಅಗರ್ವಾಲ್ ಪಂದ್ಯ ಶ್ರೇಷ್ಠರಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ