Publish Date: Tue, 28 Nov 2017 (12:06 IST)
Updated Date: Tue, 28 Nov 2017 (12:07 IST)
ದೆಹಲಿ: ರೈಲ್ವೇಸ್ ವಿರುದ್ಧ ರಣಜಿ ಟ್ರೋಫಿ ಪಂದ್ಯದ ಅಂತಿಮ ದಿನವಾದ ಇಂದು ಕರ್ನಾಟಕ ಎದುರಾಳಿಗೆಎ 377 ರನ್ ಗಳ ಬೃಹತ್ ಗೆಲುವಿನ ಗುರಿ ನೀಡಿದೆ.
ಈ ಗುರಿ ಬೆನ್ನಟ್ಟಿರುವ ರೈಲ್ವೇಸ್ ಊಟದ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 22 ರನ್ ಕಲೆ ಹಾಕಿದೆ. ಇದಕ್ಕೂ ಮೊದಲು ಕರ್ನಾಟಕ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಇದೀಗ ಬ್ಯಾಟಿಂಗ್ ಆರಂಭಿಸಿರುವ ರೈಲ್ವೇಸ್ ಗೆ ಕೆ ಗೌತಮ್ ಆರಂಭದಲ್ಲೇ ವಿಕೆಟ್ ಕೀಳುವ ಮೂಲಕ ಆಘಾತ ನೀಡಿದ್ದಾರೆ. ಗೆಲುವಿಗೆ ರೈಲ್ವೇಸ್ ಇನ್ನೂ 355 ರನ್ ಗಳಿಸಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ