Daily Horoscope

Select Your Language

Notifications

webdunia
webdunia
webdunia
webdunia

ಆರ್ ಸಿಬಿ ಅಲ್ಲ, ಈ ಐಪಿಎಲ್ ತಂಡಕ್ಕೆ ಮೆಂಟರ್ ಆಗಲಿದ್ದಾರೆ ರಾಹುಲ್ ದ್ರಾವಿಡ್

Rahul Dravid
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಯಿಂದ ನಿರ್ಗಮಿಸಿದ ಬಳಿಕ ರಾಹುಲ್ ದ್ರಾವಿಡ್ ಮುಂದಿನ ನಡೆಯೇನಿರಬಹುದು ಎಂದು ಎಲ್ಲರಿಗೂ ಕುತೂಲಹವಿದೆ. ಅವರ ಬಗ್ಗೆ ಈಗ ಹೊಸದೊಂದು ಸುದ್ದಿ ಹರಿದಾಡುತ್ತಿದೆ.

ರಾಹುಲ್ ದ್ರಾವಿಡ್ ಮುಂದಿನ ದಿನಗಳಲ್ಲಿ ಐಪಿಎಲ್ ತಂಡದ ಕೋಚ್ ಆಗಬಹುದು ಎಂದು ಎಲ್ಲರೂ ಊಹಿಸಿದ್ದರು. ಅದೀಗ ನಿಜವಾಗುವ ಲಕ್ಷಣ ಕಾಣುತ್ತಿದೆ. ರಾಹುಲ್ ದ್ರಾವಿಡ್ ಆರ್ ಸಿಬಿ ತಂಡವನ್ನು ಕೂಡಿಕೊಳ್ಳಲಿ ಎಂದು ಆರ್ ಸಿಬಿ ಫ್ಯಾನ್ಸ್ ಆಗ್ರಹಿಸಿದ್ದರು.

ಆದರೆ ದ್ರಾವಿಡ್ ಆರ್ ಸಿಬಿ ಅಲ್ಲ, ಇನ್ನೊಂದು ತಂಡದ ಪಾಲಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಶಾರುಖ್ ಖಾನ್ ಸಹ ಮಾಲಿಕರಾಗಿರುವ ಹಾಲಿ ಚಾಂಪಿಯನ್ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡಕ್ಕೆ ದ್ರಾವಿಡ್ ಮೆಂಟರ್ ಆಗಲಿದ್ದಾರೆ. ಈ ಬಗ್ಗೆ ಶಾರುಖ್ ಈಗಾಗಲೇ ಮಾತುಕತೆಯನ್ನೂ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈಗ ಕೆಕೆಆರ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ತಂಡ ಬಿಟ್ಟು ಟೀಂ ಇಂಡಿಯಾ ಮುಖ್ಯ ಕೋಚ್ ಆಗಲಿದ್ದಾರೆ ಎಂಬ ಮಾತುಗಳಿವೆ. ಇನ್ನು ಘೋಷಣೆಯೊಂದೇ ಬಾಕಿ. ಹೀಗಾಗಿ ಗಂಭೀರ್ ರಿಂದ ತೆರವಾಗುವ ಸ್ಥಾನಕ್ಕೆ ದ್ರಾವಿಡ್ ಮತ್ತು ದ್ರಾವಿಡ್ ರಿಂದ ತೆರವಾಗುವ ಟೀಂ ಇಂಡಿಯಾ ಸ್ಥಾನಕ್ಕೆ ಗಂಭೀರ್ ಆಯ್ಕೆಯಾಗಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಷ್ಟು ಚಂದ ತುಳು ಅರ್ಥಮಾಡಿಕೊಳ್ತಾರೆ ಕುಡ್ಲದ ಅಳಿಯ ಸೂರ್ಯಕುಮಾರ್ ಯಾದವ್