Select Your Language

Notifications

webdunia
webdunia
webdunia
webdunia

T20 World Cup 2024: ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಗೆ ಇಂದು ವಿದಾಯ

Rahul Dravid

Krishnaveni K

ಬಾರ್ಬಡೋಸ್ , ಶನಿವಾರ, 29 ಜೂನ್ 2024 (10:43 IST)
ಬಾರ್ಬಡೋಸ್: ಟೀಂ ಇಂಡಿಯಾಗೆ ಇಂದು ಟಿ20 ವಿಶ್ವಕಪ್ ಫೈನಲ್ ಜೊತೆಗೆ ಮತ್ತೊಂದು ವಿಶೇಷ ದಿನವಾಗಿದೆ. ಕೋಚ್ ಆಗಿ ರಾಹುಲ್ ದ್ರಾವಿಡ್ ಗೆ ಇಂದು ಕೊನೆಯ ದಿನ. ಹೀಗಾಗಿ ಟೀಂ ಇಂಡಿಯಾ ಆಟಗಾರರಿಗೆ ಇಂದು ಭಾವುಕ ದಿನವಾಗಿರಲಿದೆ.

ರಾಹುಲ್ ದ್ರಾವಿಡ್ ಕೋಚ್ ಅವಧಿ ಈ ತಿಂಗಳಿಗೆ ಮುಕ್ತಾಯವಾಗುತ್ತಿದೆ. ಮರಳಿ ಆಯ್ಕೆ ಬಯಸಿ ಅವರು ಅರ್ಜಿ ಸಲ್ಲಿಸಿಲ್ಲ. ಈ ವಿಶ್ವಕಪ್ ನನ್ನ ಕೊನೆಯ ಟೂರ್ ಆಗಲಿದೆ ಎಂದು ದ್ರಾವಿಡ್ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಇಂದು ರಾಹುಲ್ ದ್ರಾವಿಡ್ ಗೂ ಟೀಂ ಇಂಡಿಯಾ ಜೊತೆಗೆ ಕೊನೆಯ ದಿನವಾಗಿರಲಿದೆ.

ರಾಹುಲ್ ದ್ರಾವಿಡ್ ಕೋಚ್ ಆದ ಬಳಿಕ ಟೀಂ ಇಂಡಿಯಾ ಸಾಕಷ್ಟು ಏಳು-ಬೀಳುಗಳನ್ನು ಕಂಡಿದೆ. ಎರಡು ಬಾರಿ ಐಸಿಸಿ ಟ್ರೋಫಿ ಫೈನಲ್ ತಲುಪಿದೆ. ರೋಹಿತ್ ಶರ್ಮಾ ನಾಯಕರಾಗಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಆದರೆ ಇದುವರೆಗೆ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.

ಭಾರತ ತಂಡದ ಆಟಗಾರನಾಗಿಯೂ ದ್ರಾವಿಡ್ ಗೆ ವಿಶ್ವಕಪ್ ಒಲಿದಿರಲಿಲ್ಲ. ಆದರೆ ಕೋಚ್ ಆಗಿಯಾದರೂ ವಿಶ್ವಕಪ್ ವಿಜೇತ ತಂಡದ ಭಾಗವಾಗಲು ಬಯಸುತ್ತೇನೆ ಎಂದು ಈ ಟೂರ್ನಿಯ ಆರಂಭದಲ್ಲೇ ದ್ರಾವಿಡ್ ಹೇಳಿದ್ದರು. ಅದನ್ನೀಗ ನನಸಾಗುವ ಜವಾಬ್ಧಾರಿ ಟೀಂ ಇಂಡಿಯಾ ಆಟಗಾರರದ್ದಾಗಿದೆ. ಅದರೊಂದಿಗೆ ದ್ರಾವಿಡ್ ಗೆ ತಕ್ಕ ಬೀಳ್ಕೊಡುಗೆ ನೀಡಲು ಟೀಂ ಇಂಡಿಯಾ ಆಟಗಾರರು ತಯಾರಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

T20 World Cup 2024: ಫೈನಲ್ ಪಂದ್ಯಕ್ಕೆ ಅಂಪಾಯರ್ ಲಿಸ್ಟ್ ನೋಡಿ ಫ್ಯಾನ್ಸ್ ಗೆ ಟೆನ್ಷನ್