Select Your Language

Notifications

webdunia
webdunia
webdunia
Saturday, 5 April 2025
webdunia

ಟಿ20 ವಿಶ್ವಕಪ್ ಬಳಿಕ ಕೋಚ್ ಸ್ಥಾನಕ್ಕೆ ಗುಡ್ ಬೈ: ರಾಹುಲ್ ದ್ರಾವಿಡ್ ಘೋಷಣೆ

Rahul Dravid

Krishnaveni K

ನ್ಯೂಯಾರ್ಕ್ , ಮಂಗಳವಾರ, 4 ಜೂನ್ 2024 (10:22 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ಗುಡ್ ಬೈ ಹೇಳುವುದಾಗಿ ರಾಹುಲ್ ದ್ರಾವಿಡ್ ಘೋಷಣೆ ಮಾಡಿದ್ದಾರೆ.

ಈಗಾಗಲೇ ಬಿಸಿಸಿಐ ರಾಹುಲ್ ದ್ರಾವಿಡ್ ರಿಂದ ತೆರವಾಗಲಿರುವ ಸ್ಥಾನಕ್ಕೆ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ. ಗೌತಮ್ ಗಂಭೀರ್ ಮುಂದಿನ ಕೋಚ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದರ ನಡುವೆ ದ್ರಾವಿಡ್ ಅವಧಿ ಈ ತಿಂಗಳಿಗೆ ಮುಕ್ತಾಯವಾಗುತ್ತಿದೆ. ಹೀಗಾಗಿ ಇದಾದ ಬಳಿಕ ಮೂರನೇ ಅವಧಿಗೆ ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಆಸಕ್ತಿ ತಮಗಿಲ್ಲ ಎಂದು ದ್ರಾವಿಡ್ ಅಧಿಕೃತವಾಗಿ ಘೋಷಿಸಿದ್ದಾರೆ.

ದ್ರಾವಿಡ್ ಕೋಚ್ ಆಗಿ ಭಾರತ ತಂಡದಿಂದ ಭಾರೀ ನಿರೀಕ್ಷೆಯಿತ್ತು. ಆದರೆ ಇದುವರೆಗೆ ದ್ರಾವಿಡ್ ಕೋಚ್ ಆಗಿ ಭಾರತ ತಂಡಕ್ಕೆ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಆ ಕೊರತೆ ನೀಗುವ ವಿಶ್ವಾಸದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಪ್ರಾಕ್ಟೀಸ್ ನಡುವೆಯೂ ಫ್ಯಾಮಿಲಿ ಡ್ಯೂಟಿ ಮಾಡಿದ ವಿರಾಟ್ ಕೊಹ್ಲಿ