Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಹತ್ತಿರ ಇರುವೆಯೂ ಸುಳಿಯದಂತೆ ಭದ್ರತೆ

Virat Kohli
Photo Credit: X
ನ್ಯೂಯಾರ್ಕ್: ಟಿ20 ವಿಶ್ವಕಪ್ ಗಾಗಿ ನ್ಯೂಯಾರ್ಕ್ ನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಬಿಗಿ ಭದ್ರತೆ ನೀಡಲಾಗಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟೀಂ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ಜೂನ್ 9 ರಂದು ನಡೆಯಲಿರುವ ಮಹತ್ವದ ಪಂದ್ಯಕ್ಕೆ ಉಗ್ರರ ಬೆದರಿಕೆಯಿದೆ. ಹೀಗಾಗಿ ನ್ಯೂಯಾರ್ಕ್ ನಲ್ಲಿರುವ ಟೀಂ ಇಂಡಿಯಾಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಭಾರತ ಆಡಲಿರುವ ಮೈದಾನಕ್ಕೂ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ಇದೀಗ ಶಸ್ತ್ರಧಾರೀ ಅಮೆರಿಕಾ ಪೊಲೀಸರ ನಡುವೆ ಕೊಹ್ಲಿ ಏಕಾಂಗಿಯಾಗಿ ನಡೆದುಕೊಂಡು ಬರುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊಹ್ಲಿ ಸ್ಟಾರ್ ಆಟಗಾರರಾಗಿದ್ದು, ಅವರಿಗೆ ವಿಶೇಷ ಭದ್ರತೆ ನೀಡಲಾಗಿದೆ.

ವಿಡಿಯೋ ಹಂಚಿಕೊಂಡಿರುವ ಅಭಿಮಾನಿಗಳು ಕಿಂಗ್ ಎಲ್ಲಿದ್ದರೂ ಕಿಂಗ್ ಆಗಿಯೇ ಇರುತ್ತಾರೆ ಎಂದಿದ್ದಾರೆ. ಇನ್ನು, ತಮಗೆ ಸಿಕ್ಕ ಬಿಗಿ ಭದ್ರತೆ ಸ್ವತಃ ಕೊಹ್ಲಿಗೇ ಮುಜುಗರವುಂಟು ಮಾಡಿದ ರೀತಿ ಅವರ ಮುಖಭಾವ ವಿಡಿಯೋದಲ್ಲಿ ಕಂಡುಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೈವಾನ್ ಓಪನ್ 2024 ಕ್ರೀಡಾಕೂಟ: ಜಾವೆಲಿನ್‌ ಥ್ರೋನಲ್ಲಿ ಚಿನ್ನ ಗೆದ್ದ ಡಿಪಿ ಮನು