Select Your Language

Notifications

webdunia
webdunia
webdunia
webdunia

ಟಿಕ್‌ಟಾಕ್ ಬ್ಯಾನ್ ಮಾಡಿದ ನ್ಯೂಯಾರ್ಕ್

ಟಿಕ್‌ಟಾಕ್ ಬ್ಯಾನ್ ಮಾಡಿದ ನ್ಯೂಯಾರ್ಕ್
ವಾಷಿಂಗ್ಟನ್ , ಗುರುವಾರ, 17 ಆಗಸ್ಟ್ 2023 (13:42 IST)
ವಾಷಿಂಗ್ಟನ್ : ಭದ್ರತಾ ಕಾಳಜಿಯ ಕಾರಣದಿಂದ ನ್ಯೂಯಾರ್ಕ್ ಸಿಟಿಯ ಸರ್ಕಾರಿ ಸಾಧನಗಳಲ್ಲಿ ಚೀನಾ ಮೂಲದ ವೀಡಿಯೋ ಹಂಚಿಕೆ ಪ್ಲಾಟ್ಪಾರ್ಮ್ ಟಿಕ್ಟಾಕ್ ಅನ್ನು ಬ್ಯಾನ್ ಮಾಡಲಾಗಿದೆ.

ನ್ಯೂಯಾರ್ಕ್ ಸಿಟಿಯ ಮೇಯರ್ ಎರಿಕ್ ಆಡಮ್ಸ್ ಆಡಳಿತ, ಟಿಕ್ಟಾಕ್ ನಗರದ ತಾಂತ್ರಿಕ ಜಾಲಗಳಿಗೆ ಭದ್ರತಾ ಬೆದರಿಕೆಗಳನ್ನು ಒಡ್ಡಿದೆ ಎಂದು ತಿಳಿಸಿದೆ. ಈ ಮೂಲಕ ಟಿಕ್ಟಾಕ್ ಅನ್ನು ನಿರ್ಬಂಧಿಸಿರುವ 24 ರಾಜ್ಯಗಳ ಪಟ್ಟಿಗೆ ನ್ಯೂಯಾರ್ಕ್ ಕೂಡಾ ಸೇರಿಕೊಳ್ಳುತ್ತದೆ ಎಂದು ವರದಿಗಳು ತಿಳಿಸಿವೆ.

ಇಲ್ಲಿನ ಎಲ್ಲ ಏಜೆನ್ಸಿಗಳು 30 ದಿನಗಳ ಒಳಗೆ ಅಪ್ಲಿಕೇಶನ್ ಅನ್ನು ಅನ್ಇನ್ಸ್ಟಾಲ್ ಮಾಡಬೇಕಾಗುತ್ತದೆ. ಸರ್ಕಾರ ಒದಗಿಸಿದ ಮೊಬೈಲ್ ಸಾಧನಗಳು ಹಾಗೂ ನೆಟ್ವರ್ಕ್ಗಳಲ್ಲಿ ಇನ್ನು ಮುಂದೆ ಟಿಕ್ಟಾಕ್ ಹಾಗೂ ಅದರ ವೆಬ್ಸೈಟ್ಗೆ ಪ್ರವೇಶ ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ. ನ್ಯೂಯಾರ್ಕ್ ರಾಜ್ಯಾಡಳಿತ ಕೆಲವು ವಿನಾಯಿತಿಗಳೊಂದಿಗೆ 3 ವರ್ಷಗಳಿಗೂ ಹೆಚ್ಚು ಕಾಲ ಟಿಕ್ಟಾಕ್ ನಿಷೇಧಿಸಿ ಆದೇಶಿಸಿದೆ. 

ಟಿಕ್ಟಾಕ್ ಅನ್ನು 15 ಕೋಟಿಗೂ ಹೆಚ್ಚು ಅಮೆರಿಕನ್ನರು ಬಳಸುತ್ತಿದ್ದಾರೆ. ಇದು ಭದ್ರತೆಗೆ ಅಪಾಯ ಉಂಟುಮಾಡುತ್ತಿರುವುದರಿಂದ ಸರ್ಕಾರಿ ಸಾಧನಗಳಲ್ಲಿ ಬ್ಯಾನ್ ಮಾಡಲಾಗುತ್ತಿದೆ. ಭಾರತದಲ್ಲಿ ಟಿಕ್ಟಾಕ್ ಅನ್ನು 2020ರ ಜೂನ್ನಲ್ಲಿಯೇ ಬ್ಯಾನ್ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಣಿಪುರ ತನಿಖೆಗೆ 53 ಸಿಬಿಐ ಅಧಿಕಾರಿಗಳ ನಿಯೋಜನೆ