ನ್ಯೂಯಾರ್ಕ್: ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಒಂಭತ್ತನೇ ಆವೃತ್ತಿಯ ಟಿ20 ವಿಶ್ವಕಪ್ ನಡೆಯಲಿದೆ. ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಈ ಬಾರಿಯ ಟಿ20 ವಿಶ್ವಕಪ್ ನಡೆಯಲಿದೆ.
ಇದುವರೆಗೆ ನಡೆದ ಎಂಟು ವಿಶ್ವಕಪ್ ಆವೃತ್ತಿಗಳ ಪೈಕಿ ಪ್ರತೀ ವಿಶ್ವಕಪ್ ಆವೃತ್ತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಆಟಗಾರರಿಗೆ ಮ್ಯಾನ್ ಆಫ್ ದಿ ಟೂರ್ನಮೆಂಟ್ ಅವಾರ್ಡ್ ನೀಡಲಾಗಿದೆ. ಭಾರತ ಇದುವರೆಗೆ ಒಮ್ಮೆ ಮಾತ್ರ ಚಾಂಪಿಯನ್ ಆಗಿರುವುದು. ಹಾಗಿದ್ದರೂ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಎರಡು ಬಾರಿ ಮ್ಯಾನ್ ಆಫ್ ದಿ ಟೂರ್ನಮೆಂಟ್ ಅವಾರ್ಡ್ ಪಡೆದಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ಎರಡು ಬಾರಿ ಸರಣಿ ಶ್ರೇಷ್ಠ ಪಡೆದ ಏಕೈಕ ಕ್ರಿಕೆಟಿಗ ಕೊಹ್ಲಿ. ಉಳಿದಂತೆ ಯಾವ ಆವೃತ್ತಿಯಲ್ಲಿ ಯಾರು ಪ್ರಶಸ್ತಿ ಗೆದ್ದರು ಎಂಬ ವಿವರ ಇಲ್ಲಿದೆ.
ಟಿ20 ವಿಶ್ವಕಪ್ 2007: ಶಾಹಿದ್ ಅಫ್ರಿದಿ (ಪಾಕಿಸ್ತಾನ)
ಟಿ20 ವಿಶ್ವಕಪ್ 2008: ತಿಲಕರತ್ನೆ ದಿಲ್ಶನ್ (ಶ್ರೀಲಂಕಾ)
ಟಿ20 ವಿಶ್ವಕಪ್ 2010: ಕೆವಿನ್ ಪೀಟರ್ಸನ್ (ಇಂಗ್ಲೆಂಡ್)
ಟಿ20 ವಿಶ್ವಕಪ್ 2012: ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ)
ಟಿ20 ವಿಶ್ವಕಪ್ 2014: ವಿರಾಟ್ ಕೊಹ್ಲಿ (ಭಾರತ)
ಟಿ20 ವಿಶ್ವಕಪ್ 2016: ವಿರಾಟ್ ಕೊಹ್ಲಿ(ಭಾರತ)
ಟಿ20 ವಿಶ್ವಕಪ್ 2021: ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)
ಟಿ20 ವಿಶ್ವಕಪ್ 2022: ಸ್ಯಾಮ್ ಕ್ಯುರೇನ್ (ಇಂಗ್ಲೆಂಡ್)