Webdunia - Bharat's app for daily news and videos

Install App

ಟೀಂ ಇಂಡಿಯಾ ಅತ್ಯಂತ ತುಂಟ ಯಾರು ಎಂದು ಬಹಿರಂಗಪಡಿಸಿದ ರಾಹುಲ್ ದ್ರಾವಿಡ್

Krishnaveni K
ಸೋಮವಾರ, 11 ಮಾರ್ಚ್ 2024 (13:11 IST)
Photo Courtesy: Twitter
ಧರ್ಮಶಾಲಾ: ಟೀಂ ಇಂಡಿಯಾ ಕ್ರಿಕೆಟಿಗರು ಮೈದಾನದಲ್ಲಿ ಎದುರಾಳಿಗಳನ್ನು ಕಿಚಾಯಿಸುವುದರಲ್ಲಿ, ಪರಸ್ಪರ ತಮಾಷೆ ಮಾಡಿಕೊಳ್ಳುವುದರಲ್ಲಿ ನಿಸ್ಸೀಮರು. ಹಾಗಿದ್ದರೆ ತಂಡದ ಅತ್ಯಂತ ತುಂಟ ಆಟಗಾರ ಯಾರು ಎಂಬ ಪ್ರಶ್ನೆಗೆ ಸ್ವತಃ ಕೋಚ್ ರಾಹುಲ್ ದ್ರಾವಿಡ್ ಉತ್ತರಿಸಿದ್ದಾರೆ.

ರೋಹಿತ್ ಮತ್ತು ದ್ರಾವಿಡ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ನಿರೂಪಕರು ತಂಡದ ತುಂಟ ಆಟಗಾರ ಯಾರು ಎಂದು ಕೋಚ್ ದ್ರಾವಿಡ್ ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ದ್ರಾವಿಡ್ ಜೋರಾಗಿ ನಕ್ಕಿದ್ದು, ಕೊನೆಗೆ ನನಗೆ ಅನಿಸುವ ಪ್ರಕಾರ ‘ಶರ್ಮಾ ಜೀ’ ಎಂದು ರೋಹಿತ್ ಕಡೆಗೆ ಬೆರಳು ಮಾಡಿದ್ದಾರೆ.

ಆಗ ನಿರೂಪಕರು ನಗು ತಡೆಯಲಾಗದೇ ರೋಹಿತ್ ಹೌದಾ ಎಂದು ಪ್ರಶ್ನಿಸಿದ್ದಾರೆ. ದ್ರಾವಿಡ್ ಕೂಡಾ ‘ಅವರೂ ಕೂಡಾ ತಂಡದ ಸದಸ್ಯರೇ ಅಲ್ವಾ’ ಎಂದು ನಕ್ಕಿದ್ದಾರೆ. ಆಗ ಬಳಿಕ ರೋಹಿತ್ ‘ಎಲ್ಲಾ ವಿಚಾರದಲ್ಲೂ ತಂಡ ಮುನ್ನಡೆಸುವ ಆಟಗಾರನಾಗಿ ಇರಬೇಕಲ್ವಾ? ಹಾಗಾಗಿ ಬಹುಶಃ’ ಎಂದಿದ್ದಾರೆ. ಅವರ ಉತ್ತರ ಕೇಳಿ ಅಲ್ಲಿದ್ದವರಿಗೆ ನಗು ತಡೆಯಲಾಗಲಿಲ್ಲ.

ಈ ಸಂದರ್ಶನದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೋಹಿತ್ ಶರ್ಮಾ ಮೈದಾನದಲ್ಲಿ ಸಹ ಆಟಗಾರರೊಂದಿಗೆ ಮಾಡುವ ತಮಾಷೆಗಳು, ಫನ್ನಿ ಘಟನೆಗಳು ಎಲ್ಲರ ಗಮನ ಸೆಳೆಯುತ್ತದೆ. ಯುವ ಆಟಗಾರರನ್ನು ಸದಾ ತಮಾಷೆ ಮಾಡಿ ಕಾಲೆಳೆಯುತ್ತಲೇ ಇರುತ್ತಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: 89 ವರ್ಷಗಳ ಶಾಪ ಕಳೆಯಲು ಹೊರಟ ಟೀಂ ಇಂಡಿಯಾ

ಸರ್ಫರಾಜ್ ಖಾನ್ ಎರಡೇ ತಿಂಗಳಲ್ಲಿ 17 ಕೆಜಿ ತೂಕ ಇಳಿಸಿದ್ದು ಹೇಗೆ

ರಿಷಭ್ ಪಂತ್ ನಾಲ್ಕನೇ ಟೆಸ್ಟ್ ಆಡುವ ಬಗ್ಗೆ ಇಲ್ಲಿದೆ ಲೇಟೆಸ್ಟ್ ಅಪ್ ಡೇಟ್

ತೂಕ ಇಳಿಸಿಕೊಂಡ ಕ್ರಿಕೆಟಿಗ ಸರ್ಫರಾಜ್ ಖಾನ್: ಇವರೇನಾ ಅವರು

Kantara Chpater 1: ಕೊನೆಗೂ ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಗಿಯಿತು: video

ಮುಂದಿನ ಸುದ್ದಿ
Show comments