Webdunia - Bharat's app for daily news and videos

Install App

ರಿಷಬ್ ಪಂತ್ ಗೆ ಇಂದೇ ಫಿಟ್ನೆಸ್ ಸರ್ಟಿಫಿಕೇಟ್

Krishnaveni K
ಸೋಮವಾರ, 11 ಮಾರ್ಚ್ 2024 (11:00 IST)
Photo Courtesy: Twitter
ಬೆಂಗಳೂರು: ಐಪಿಎಲ್ 2024 ರಲ್ಲಿ ರಿಷಬ್ ಪಂತ್ ಗೆ ಆಡಲು ಫಿಟ್ನೆಸ್ ಸರ್ಟಿಫಿಕೇಟ್ ಇಂದೇ ಸಿಗುವ ಸಾಧ‍್ಯತೆಯಿದೆ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡಮಿಯಿಂದ ಇಂದು ಫಿಟ್ನೆಸ್ ಸರ್ಟಿಫಿಕೇಟ್ ಸಿಗುವ ಸಾಧ‍್ಯತೆಯಿದೆ.

ಕಳೆದ ವರ್ಷ ರಸ್ತೆ ಅಪಘಾತಕ್ಕೀಡಾಗಿದ್ದ ರಿಷಬ್ ಪಂತ್ ಕಾಲು ಮುರಿತಕ್ಕೊಳಗಾಗಿದ್ದರು. ಇದಾದ ಬಳಿಕ ಅವರಿಗೆ ನಡೆದಾಡಲೂ ಕಷ್ಟವಾಗಿತ್ತು. ಶಸ್ತ್ರಚಿಕಿತ್ಸೆಗೊಳಗಾದ ನಂತರ ಚೇತರಿಕೆ ಕಂಡುಬಂದರೂ ಇದುವರೆಗೆ ಅವರು ಆಡಲು ಫಿಟ್ ಆಗಿದ್ದಾರೆಂದು ಫಿಟ್ನೆಸ್ ಸರ್ಟಿಫಿಕೇಟ್ ಸಿಕ್ಕಿರಲಿಲ್ಲ.

ಕಳೆದ ಕೆಲವು ಸಮಯದಿಂದ ಬೆಂಗಳೂರಿನ ಎನ್ ಸಿಎನಲ್ಲಿ ಅವರು ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಎನ್ ಸಿಎ ವೈದ್ಯರು ಅವರು ಆಡಲು 100% ಫಿಟ್ ಎಂದು ಸರ್ಟಿಫಿಕೇಟ್ ನೀಡಲಿದ್ದಾರೆ.  ಇದಾದ ಬಳಿಕವಷ್ಟೇ ಅವರು ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮರಳಬಹುದಾಗಿದೆ.

ಮಾರ್ಚ್ 22 ರಿಂದ ಐಪಿಎಲ್ 2024 ಆರಂಭವಾಗುತ್ತಿದೆ. ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಆಡುತ್ತಾರೆ. ಡೆಲ್ಲಿ ತಂಡದ ನಾಯಕರಾಗಿ ಮತ್ತೆ ಐಪಿಎಲ್ ಗೆ ಕಮ್ ಬ್ಯಾಕ್ ಮಾಡುವ ಸಿದ್ಧತೆಯಲ್ಲಿದ್ದಾರೆ. ಐಪಿಎಲ್ ನಲ್ಲಿ ಅವರು ಆಡಲು ಸಾಧ್ಯವಾದರೆ ಮಾತ್ರ ಮುಂಬರುವ ಟಿ20 ವಿಶ್ವಕಪ್ ನಲ್ಲಿ ಆಡಲು ಅವಕಾಶ ಸಿಗಲಿದೆ. ಹೀಗಾಗಿ ಈ ಫಿಟ್ನೆಸ್ ಸರ್ಟಿಫಿಕೇಟ್ ಅವರ ವೃತ್ತಿ ಜೀವನಕ್ಕೆ ಮುಖ್ಯವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏರ್ ಇಂಡಿಯಾ ವಿಮಾನ ಹತ್ತಲ್ಲ ಎಂದ ಡೇವಿಡ್ ವಾರ್ನರ್: ನಾವೂ ಹೋಗಲ್ಲ ಎಂದ ನೆಟ್ಟಿಗರು

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್: ಇತಿಹಾಸ ನಿರ್ಮಿಸಲು ಹೊರಟ ದಕ್ಷಿಣ ಆಫ್ರಿಕಾ

ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

Gautam Gambhir: ಗೌತಮ್ ಗಂಭೀರ್ ತಾಯಿಗೆ ಗಂಭೀರ: ಭಾರತಕ್ಕೆ ಮರಳಿದ ಟೀಂ ಇಂಡಿಯಾ ಕೋಚ್

Shubman Gill: ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಶುಬ್ಮನ್ ಗಿಲ್ ತಲೆಗೆ ಹತ್ತಿದ್ಯಾ: ನೆಟ್ಟಿಗರ ಆಕ್ರೋಶ

ಮುಂದಿನ ಸುದ್ದಿ
Show comments