ಡಬ್ಲ್ಯುಪಿಎಲ್ 2024: ಸೋತು ಕೂತಿದ್ದ ರಿಚಾ ಘೋಷ್ ಗೆ ಸಮಾಧಾನಿಸಿದ ಜೆಮಿಮಾ ರೊಡ್ರಿಗಸ್

Krishnaveni K
ಸೋಮವಾರ, 11 ಮಾರ್ಚ್ 2024 (08:49 IST)
Photo Courtesy: Twitter
ದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಾರ್ಟ್ ಬ್ರೇಕಿಂಗ್ ಸೋಲು ಕಂಡ ಆರ್ ಸಿಬಿ ಹುಡುಗಿಯರು ತೀವ್ರ ನಿರಾಶೆಗೊಳಗಾಗಿದ್ದಾರೆ. ಗೆಲುವಿನ ರನ್ ಗಳಿಸಲಾಗದೇ ಮೈದಾನದಲ್ಲೇ ಕುಸಿದು ಕೂತಿದ್ದ ರಿಚಾ ಘೋಷ್ ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ್ತಿಯರು ಸಮಾಧಾನಿಸಿದ್ದಾರೆ.

ಕೊನೆಯ ಎಸೆತದಲ್ಲಿ 2 ರನ್ ಬೇಕಾಗಿದ್ದಾಗ ರಿಚಾ ಘೋಷ್ ಒಂದು ರನ್ ಗಳಿಸಿ ಎರಡನೇ ರನ್ ನತ್ತ ಧಾವಿಸಿದ್ದರು. ಆದರೆ ಅದನ್ನು ಪೂರ್ತಿ ಮಾಡಲಾಗದೇ ರನೌಟ್ ಆದಾಗ ತೀವ್ರ ದುಃಖಿತರಾದ ರಿಚಾ ಘೋಷ್ ಮೈದಾನದಲ್ಲೇ ಕುಸಿದು ಕೂತು ಅತ್ತರು. ಅವರ ಜೊತೆಗಾತಿ ಶ್ರೇಯಾಂಕ ಪಾಟೀಲ್ ರದ್ದು ಇದೇ ಸ್ಥಿತಿ. ಆದರೆ ರಿಚಾಗೆ ಇನ್ನಿಲ್ಲದ ಆಘಾತವಾಗಿತ್ತು. ಸೋಲಿನ ಅಂಚಿನಲ್ಲಿದ್ದ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದೇ ಅವರ ಬ್ಯಾಟಿಂಗ್. 29  ಎಸೆತಗಳಿಂದ 51 ರನ್ ಚಚ್ಚಿದ್ದ ರಿಚಾಗೆ ಗೆಲುವಿನ ರನ್ ಗಳಿಸಲಾಗಲಿಲ್ಲ. ಹೀಗಾಗಿ ತೀವ್ರ ಬೇಸರಗೊಂಡಿದ್ದರು.

ಪಂದ್ಯ ಸೋತಾಗ ಕುಸಿದು ಕೂತಿದ್ದ ರಿಚಾ ಬಳಿ ಬಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೆಮಿಮಾ ರೊಡ್ರಿಗಸ್ ಎದ್ದು ಕೂರಿಸಿ ಸ್ಪೂರ್ತಿದಾಯಕ ಮಾತನಾಡಿ ಸಮಾಧಾನಿಸಿದ್ದಾರೆ. ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿದ ಜೆಮಿಮಾ ‘ರಿಚಾ ಬಗ್ಗೆ ನನಗೆ ಬೇಸರವಿದೆ. ಆದರೆ ಇದು ನಿನಗೆ ಅನುಭವವಾಗುತ್ತದೆ. ಯಾರಿಗೆ ಗೊತ್ತು? ಮುಂದೆ ವಿಶ್ವಕಪ್ ಫೈನಲ್ ನಲ್ಲಿ ಭಾರತಕ್ಕೆ ನೀನು ವಿಜಯದ ರನ್ ಗಳಿಸಿಕೊಡಬಹುದು ಎಂದು ಸಮಾಧಾನಿಸಿದೆ’ ಎಂದಿದ್ದಾರೆ.

ಜೆಮಿಮಾ ಮಾತ್ರವಲ್ಲ, ಇಡೀ ಡೆಲ್ಲಿ ಕ್ಯಾಪಿಟಲ್ಸ್ ತಂಡವೇ ರಿಚಾ ಮತ್ತು ಶ್ರೇಯಾಂಕ ಬಳಿಗೆ ಬಂದು ಸಮಾಧಾನಿಸಿದ್ದಾರೆ. ಅದರಲ್ಲೂ ಶಫಾಲಿ ವರ್ಮ ಹೆಗಲ ಮೇಲೆ ಕೈ ಹಾಕಿ ನಗಿಸುವ ಪ್ರಯತ್ನ ಮಾಡಿದ್ದಾರೆ. ಇವರೆಲ್ಲರ ಈ ದೃಶ್ಯಗಳು ನೋಡುಗರ ಕಣ್ಣಂಚು ಒದ್ದೆಯಾಗಿಸಿದ್ದಂತೂ ನಿಜ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಐಪಿಎಲ್ ನಲ್ಲಿ ಮಾಲಿಕರು ಏನೇನೋ ಪ್ರಶ್ನೆ ಕೇಳ್ತಾರೆ: ಕೆಎಲ್ ರಾಹುಲ್ ಬಿಚ್ಚಿಟ್ಟ ಸತ್ಯ

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

IND vs SA: ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕೋಚ್ ಆಗಿ ಬಂದಾಗ ರಾಹುಲ್ ದ್ರಾವಿಡ್ ಹೇಳಿದ್ದ ಈ ಮಾತು ಗಂಭೀರ್ ಗೂ ಪಾಠವಾಗಬೇಕು

ಮುಂದಿನ ಸುದ್ದಿ
Show comments