Select Your Language

Notifications

webdunia
webdunia
webdunia
webdunia

ಡಬ್ಲ್ಯುಪಿಎಲ್ 2024: ಈ ಸಲ ಕಪ್ ನಮ್ದಾಗಬೇಕಾದರೆ ಇಂದು ಆರ್ ಸಿಬಿ ಗೆಲ್ಲಲೇಬೇಕು

WPL 2024 RCB

Krishnaveni K

ಬೆಂಗಳೂರು , ಸೋಮವಾರ, 4 ಮಾರ್ಚ್ 2024 (15:07 IST)
ಬೆಂಗಳೂರು: ಡಬ್ಲ್ಯುಪಿಎಲ್ ನಲ್ಲಿ ಈ ಬಾರಿಯಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುತ್ತಾ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸ್ಮೃತಿ ಮಂದನಾ ಪಡೆ ಕಪ್ ಗೆಲ್ಲಬೇಕಾದರೆ ಇಂದು ಯುಪಿ ವಾರಿಯರ್ಸ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಡಬ್ಲ್ಯುಪಿಎಲ್ 2024 ರಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆದ್ದು ಶುಭಾರಂಭ ಮಾಡಿದ್ದ ಆರ್ ಸಿಬಿ ಬಳಿಕ ಪ್ರಬಲ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಸೋತ ಆರ್ ಸಿಬಿ ಈಗ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಾರಿದೆ.

ಸ್ಮೃತಿ ಮಂಧಾನ ಪಡೆ ಇಂದು ಯುಪಿ ವಾರಿಯರ್ಸ್ ವಿರುದ್ಧ ಮಹತ್ವದ ಪಂದ್ಯವಾಡಲಿದೆ. ಈ ಪಂದ್ಯ ಗೆದ್ದರಷ್ಟೇ ಸ್ಮೃತಿ ಮಂಧಾನ ಪಡೆಗೆ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಉತ್ತಮ ಅವಕಾಶವಿರಲಿದೆ. ಇದೇ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಸ್  ವಿರುದ್ಧ ಆಡಿದ್ದ ಆರ್ ಸಿಬಿ ರೋಚಕ ಗೆಲುವು ಕಂಡಿತ್ತು.

ಇದೀಗ ಮತ್ತೊಮ್ಮೆ ಅದೇ ತಂಡವನ್ನು ಸೋಲಿಸುವ ವಿಶ್ವಾಸದಲ್ಲಿದೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಸ್ಮೃತಿ ಪಡೆಗೆ ಒಮ್ಮೆ ಬೌಲಿಂಗ್, ಒಮ್ಮೆ ಬ್ಯಾಟಿಂಗ್ ಕೈ ಕೊಟ್ಟಿದೆ. ಈ ಹುಳುಕುಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಇನ್ನೊಂದೆಡೆ ಯುಪಿ ಕೂಡಾ ಎರಡು ಪಂದ್ಯ ಸೋತು ಎರಡು ಪಂದ್ಯ ಗೆದ್ದುಕೊಂಡಿದೆ. ಆದರೆ ರನ್ ಸರಾಸರಿ ವಿಚಾರದಲ್ಲಿ ಆರ್ ಸಿಬಿಗಿಂತ ಮುಂದಿದೆ. ಸದ್ಯಕ್ಕೆ ಮೂರನೇ ಸ್ಥಾನದಲ್ಲಿರುವ ಯುಪಿ ಈ ಪಂದ್ಯ ಗೆದ್ದು ಎರಡನೇ ಸ್ಥಾನಕ್ಕೇರುವ ವಿಶ್ವಾಸದಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024 ಕ್ಕೆ ಕೆಎಲ್ ರಾಹುಲ್ ಕಮ್ ಬ್ಯಾಕ್