ಬೆಂಗಳೂರು: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡಕ್ಕೆ ಯುಪಿ ವಾರಿಯರ್ಸ್ ಸೋಲಿನ ಆಘಾತ ನೀಡಿದೆ. ಯುಪಿ ಎದುರು ಮುಂಬೈ 7 ವಿಕೆಟ್ ಗಳ ಸೋಲು ಕಂಡಿದೆ. 
									
			
			 
 			
 
 			
					
			        							
								
																	ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. ಮುಂಬೈ ಪರ ಹೇಲೀ ಮ್ಯಾಥ್ಯೂಸ್  55, ಯಶಿಕಾ ಭಾಟಿಯಾ 26 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಹರ್ಮನ್ ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ತಂಡದ ನಾಯಕಿಯಾಗಿದ್ದ ನ್ಯಾಟ್ ಸಿವರ್ ಬ್ರಂಟ್ 19 ರನ್ ಗಳಿಸಲಷ್ಟೇ ಶಕ್ತವಾದರು.
									
										
								
																	ಈ ಮೊತ್ತ ಬೆನ್ನತ್ತಿದ ಯುಪಿ ವಾರಿಯರ್ಸ್ ಕಿರನ್ ನವಿಗೆರೆ ಭರ್ಜರಿ ಬ್ಯಾಟಿಂಗ್ ನೆರವಿನಿಂದ 16.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಅಲಿಸಾ ಹೀಲೇ 33, ಗ್ರೇಸ್ ಹ್ಯಾರಿಸ್ 38, ದೀಪ್ತಿ ಶರ್ಮ 27 ರನ್ ಗಳಿಸಿದರು. ಮುಂಬೈ ಪರ ಇಸಿ ವಾಂಗ್ ಎರಡು ವಿಕೆಟ್ ಲಭ್ಯವಾಯಿತು.
									
											
							                     
							
							
			        							
								
																	ಮುಂಬೈಗೆ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಕೊರತೆ ಎದ್ದು ಕಂಡಿತ್ತು. ಸಣ್ಣ ಗಾಯದ ಕಾರಣದಿಂದ ಹರ್ಮನ್ ಪ್ರೀತ್ ಇಂದಿನ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಸಿವರ್ ಬ್ರಂಟ್ ನಾಯಕತ್ವ ವಹಿಸಿದ್ದರು.