Select Your Language

Notifications

webdunia
webdunia
webdunia
webdunia

ಧೋನಿ ಮನೆ ಗೇಟ್ ಹೊರಗೆ ನಿಂತ ರವೀಂದ್ರ ಜಡೇಜಾ

Ravindra Jadeja
Photo Courtesy: Instagram
ರಾಂಚಿ: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯವಾಡಲು ರಾಂಚಿಗೆ ತೆರಳಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಧೋನಿ ಮನೆ ಗೇಟ್ ಮುಂದೆ ನಿಂತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಧೋನಿ ಮೇಲೆ ರವೀಂದ್ರ ಜಡೇಜಾಗೆ ಅಪಾರ ಗೌರವವಿದೆ. ಕೇವಲ ಭಾರತ ತಂಡದಲ್ಲಿ ಮಾತ್ರವಲ್ಲ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೂ ಧೋನಿ ನಾಯಕತ್ವದಲ್ಲೇ ಜಡೇಜಾ ಆಡುತ್ತಾರೆ. ಧೋನಿಯನ್ನು ಕ್ಯಾಪ್ಟನ್ ಎಂದೇ ಪರಿಗಣಿಸುತ್ತಾರೆ.

ಇದೇ ಅಭಿಮಾನವಿಟ್ಟುಕೊಂಡು ಜಡೇಜಾ ರಾಂಚಿ ಟೆಸ್ಟ್ ಮುಗಿದ ಬಳಿಕ ಧೋನಿ ಮನೆಗೆ ಭೇಟಿ ನೀಡಿದ್ದಾರೆ. ಧೋನಿ ಮೂಲತಃ ರಾಂಚಿಯವರು. ಇಲ್ಲಿ ಸುಂದರ ಫಾರ್ಮ್ ಹೌಸ್ ‍ಒಂದು ಧೋನಿ ಬಳಿಯಿದೆ. ಹೆಚ್ಚಾಗಿ ಇಲ್ಲಿಯೇ ಕಾಲ ಕಳೆಯುತ್ತಾರೆ. ಇದೀಗ ಟೆಸ್ಟ್ ಮ್ಯಾಚ್ ಮುಗಿದ ಬೆನ್ನಲ್ಲೇ ಜಡೇಜಾ ಧೋನಿ ಮನೆಗೆ ಭೇಟಿ ನೀಡಿದ್ದಾರೆ.

 ಧೋನಿ ಮನೆಯ ಗೇಟ್ ಮುಂದೆ ನಿಂತು ಸಾಮಾನ್ಯ ಅಭಿಮಾನಿಗಳಂತೇ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಜಡೇಜಾ ‘ದಿಗ್ಗಜನ ಮನೆ ಮುಂದೆ ಸಾಮಾನ್ಯ ಅಭಿಮಾನಿಯಂತೇ ಪೋಸ್ ಕೊಡಲು ಮಜಾ ಬರುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ಅನೇಕ ಅಭಿಮಾನಿಗಳು ರಾಂಚಿಯಲ್ಲಿ ಧೋನಿ ಮನೆ ಮುಂದೆ ಫೋಟೋ ತೆಗೆಸಿಕೊಂಡು ಖುಷಿಪಡುತ್ತಾರೆ. ಜಡೇಜಾ ಕೂಡಾ ಇದೇ ರೀತಿ ಪೋಸ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕ್ರಿಕೆಟಿಗರ ಸ್ಯಾಲರಿ ವಿವರ