ಚೆನ್ನೈ: ಐಪಿಎಲ್ 2024 ರ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪೋಸ್ಟ್ ಸಂಚಲನ ಮೂಡಿಸಿದೆ.
ಸಾಮಾನ್ಯವಾಗಿ ಧೋನಿ ಸೋಷಿಯಲ್ ಮೀಡಿಯಾ ಬಳಸುವುದಿಲ್ಲ. ಖಾತೆಯಿದ್ದರೂ ಅವರು ತಮ್ಮ ಖಾತೆಯಿಂದ ಯಾವುದೇ ಪೋಸ್ಟ್ ಮಾಡಲ್ಲ. ಒಮ್ಮೆ ತಮ್ಮ ಫಾರ್ಮ್ ಹೌಸ್ ವಿಚಾರವಾಗಿ ಮತ್ತೊಮ್ಮೆ ನಿವೃತ್ತಿ ವಿಚಾರವಾಗಿ ಹೇಳಲು ಸೋಷಿಯಲ್ ಮೀಡಿಯಾ ಬಳಸಿದ್ದಿದೆ.
ಆದರೆ ಇದೀಗ ಐಪಿಎಲ್ 2024 ಆರಂಭಕ್ಕೆ ಕೆಲವೇ ದಿನ ಬಾಕಿಯಿರುವಾಗ ಧೋನಿ ಫೇಸ್ ಬುಕ್ ನಲ್ಲಿ ಹೊಸ ಪೋಸ್ಟ್ ಮಾಡಿದ್ದಾರೆ. ತೀರಾ ಮಹತ್ವದ ವಿಚಾರವಿದ್ದರೆ ಮಾತ್ರ ಧೋನಿ ಪೋಸ್ಟ್ ಮಾಡುತ್ತಾರೆ. ಈಗ ಧೋನಿ ಪೋಸ್ಟ್ ಮಾಡಿರುವುದನ್ನು ನೋಡಿ ಅಭಿಮಾನಿಗಳು ಏನಿರಬಹುದು ಎಂದು ಕುತೂಹಲಗೊಳ್ಳುವಂತೆ ಮಾಡಿದೆ.
ಹೊಸ ಐಪಿಎಲ್ ಸೀಸನ್ ಗಾಗಿ ಎದಿರು ನೋಡುತ್ತಿದ್ದೇನೆ. ನನ್ನನ್ನು ಹೊಸ ರೋಲ್ ನಲ್ಲಿ ನೋಡಬಹುದು ಎಂದಿದ್ದಾರೆ. ಆ ಹೊಸ ರೋಲ್ ಏನಿರಬಹುದು. ನಿವೃತ್ತಿಯಾಗಿ ತಂಡದ ಮೆಂಟರ್ ಆಗಿರಲಿದ್ದಾರೆಯೇ ಅಥವಾ ಧೋನಿ ಈ ಬಾರಿ ಬೌಲಿಂಗ್ ಕೂಡಾ ಮಾಡ್ತಾರಾ? ಕೀಪಿಂಗ್ ಬೇರೆಯವರ ಕೈಲಿ ಮಾಡಿಸ್ತಾರಾ ಎಂಬಿತ್ಯಾದಿ ಅನುಮಾನಗಳನ್ನು ಅಭಿಮಾನಿಗಳು ಹೊರಹಾಕಿದ್ದಾರೆ. ಆದರೆ ಧೋನಿ ಮಾಡಿರುವ ಈ ಪೋಸ್ಟ್ ನಿಂದಾಗಿ ಅಭಿಮಾನಿಗಳು ಈ ಐಪಿಎಲ್ ಬಗ್ಗೆ ಹೆಚ್ಚು ಕುತೂಹಲದಿಂದ ಎದಿರು ನೋಡುವಂತಾಗಿದೆ.