Publish Date: Thu, 22 Feb 2024 (17:48 IST)
Updated Date: Thu, 22 Feb 2024 (17:55 IST)
ಮುಂಬೈ: ಐಪಿಎಲ್ 2024 ರ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಮಾರ್ಚ್ 22 ರಿಂದ ಈ ಆವೃತ್ತಿಯ ಐಪಿಎಲ್ ಗೆ ಚಾಲನೆ ಸಿಗಲಿದೆ.
ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿದೆ. ಈ ಪಂದ್ಯ ಚೆನ್ನೈನ ಚಿಪಾಕ್ ಮೈದಾನದಲ್ಲಿ ನಡೆಯಲಿದೆ. ಮೊದಲ ಪಂದ್ಯವೇ ಚೆನ್ನೈನಲ್ಲಿ ನಡೆಯುತ್ತಿರುವುದು ಧೋನಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಇದೀಗ ಆರಂಭದ 15 ದಿನಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ನಂತರ ಬಿಡುಗಡೆ ಮಾಡಲಾಗುತ್ತದೆ. ಹೆಚ್ಚಿನ ಪಂದ್ಯಗಳೂ ಮಧ್ಯಾಹ್ನ 2.30 ಮತ್ತು ಸಂಜೆ 6.30 ಕ್ಕೆ ನಡೆಯುವುದು. ಇದೀಗ ಮೊದಲ 21 ಪಂದ್ಯಗಳ ವೇಳಾಪಟ್ಟಿ ನೀಡಲಾಗಿದೆ. ಈಗ ಬಿಡುಗಡೆಯಾಗಿರುವ ವೇಳಾಪಟ್ಟಿ ಪ್ರಕಾರ ಮಾರ್ಚ್ 22 ರಿಂದ ಏಪ್ರಿಲ್ 7 ರವರೆಗೆ ಪಂದ್ಯಗಳ ವಿವರಗಳಿವೆ. ಉಳಿದ ವಿವರಗಳನ್ನು ನಂತರ ನೀಡಲಾಗುತ್ತದೆ. ಐಪಿಎಲ್ ವೇಳಾಪಟ್ಟಿ ಇಲ್ಲಿದೆ: