Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಬಳಗದಲ್ಲಿ ಯಾರೆಲ್ಲಾ ಇರ್ತಾರೆ?

ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಬಳಗದಲ್ಲಿ ಯಾರೆಲ್ಲಾ ಇರ್ತಾರೆ?
ಮುಂಬೈ , ಶನಿವಾರ, 13 ನವೆಂಬರ್ 2021 (09:45 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ದ್ರಾವಿಡ್ ಜೊತೆಗೆ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಯಾರಾಗಿರುತ್ತಾರೆ ಎಂದು ಇಲ್ಲಿ ನೋಡೋಣ.

ಈ ಮೊದಲು ಬೌಲಿಂಗ್ ಕೋಚ್ ಆಗಿದ್ದ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆಗಿದ್ದ ಆರ್. ಶ್ರೀಧರ್ ಸ್ಥಾನ ತೆರವುಗೊಳಿಸಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ದ್ರಾವಿಡ್ ಟೀಂ ನಲ್ಲಿ ಟಿ. ದಿಲೀಪ್ ಮತ್ತು ಪರಸ್ ಮಾಂಬ್ರೆ ಇರಲಿದ್ದಾರೆ.

ಈ ಪೈಕಿ ಹೈದರಾಬಾದ್ ಮೂಲದ ಟಿ. ದಿಲೀಪ್ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಆಗಲಿದ್ದು, ಇವರಿಗೆ ಎ ತಂಡದ ಪರ ಫೀಲ್ಡಿಂಗ್ ಕೋಚ್ ಆಗಿ ಕೆಲಸ ಮಾಡಿದ ಅನುಭವವಿದೆ. ಅಲ್ಲದೆ, ದ್ರಾವಿಡ್ ಜೊತೆ ಕಳೆದ ಶ್ರೀಲಂಕಾ ಸರಣಿಯಲ್ಲೂ ಟೀಂ ಇಂಡಿಯಾ ಜೊತೆಗಿದ್ದರು. ಇನ್ನು ಎನ್ ಸಿಎ, ಅಂಡರ್ 19, ಭಾರತ ಎ ತಂಡದ ಕೋಚ್ ಆಗಿ ದ್ರಾವಿಡ್ ಜೊತೆ ಕೆಲಸ ಮಾಡಿದ್ದ ಮುಂಬೈ ಮೂಲದ ವೇಗಿ ಪರಸ್ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಬ್ಯಾಟಿಂಗ್ ಕೋಚ್ ಆಗಿ ವಿಕ್ರಮ್ ರಾಥೋಡ್ ಮುಂದುವರಿಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಟ್ಟಿನ ಕೈಲಿ ಬುದ್ಧಿ ಕೊಟ್ಟು ಫೈನಲ್ ಅವಕಾಶ ಕಳೆದುಕೊಂಡ ಡೆವೋನ್ ಕಾನ್ವೇ