Publish Date: Sat, 13 Nov 2021 (09:05 IST)
Updated Date: Sat, 13 Nov 2021 (09:22 IST)
ಮುಂಬೈ: ಟೀಂ ಇಂಡಿಯಾ ನಿರ್ಗಮಿತ ಕೋಚ್ ರವಿಶಾಸ್ತ್ರಿ, ಹೊಸದಾಗಿ ನೇಮಕಗೊಂಡಿರುವ ರಾಹುಲ್ ದ್ರಾವಿಡ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಹುಲ್ ದ್ರಾವಿಡ್ ರಂತಹ ವ್ಯಕ್ತಿಗಳಿಗೆ ಸಲಹೆಗಳು ಬೇಕಾಗಿಲ್ಲ. ಅವರಿಗೆ ಏನು ಮಾಡಬೇಕು ಎಂಬುದು ಗೊತ್ತಿದೆ. ಅವರು ತಮ್ಮ ಕೆಲಸವನ್ನು ತಾವೇ ಮಾಡುತ್ತಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಬಹುಶಃ ನನಗಿಂತ ಒಳ್ಳೆಯ ಕೆಲಸಗಳನ್ನು ದ್ರಾವಿಡ್ ಮಾಡುತ್ತಾರೆ. ಅವರು ಅಂತಹ ಶ್ರೇಷ್ಠ ಹಿನ್ನಲೆಯಿಂದ ಬಂದವರು ಎಂದು ಶಾಸ್ತ್ರಿ ಹೊಗಳಿದ್ದಾರೆ.