Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದಲ್ಲಿ ಎಲ್ಲಾ ಇದೆ, ಫ್ರೆಂಡ್ ಶಿಪ್ ಇಲ್ಲ ಎಂದಿದ್ದ ಅಶ್ವಿನ್ ಹೇಳಿಕೆ ಸಮರ್ಥಿಸಿದ ಪೃಥ್ವಿ ಶಾ

ಟೀಂ ಇಂಡಿಯಾದಲ್ಲಿ ಎಲ್ಲಾ ಇದೆ, ಫ್ರೆಂಡ್ ಶಿಪ್ ಇಲ್ಲ ಎಂದಿದ್ದ ಅಶ್ವಿನ್ ಹೇಳಿಕೆ ಸಮರ್ಥಿಸಿದ ಪೃಥ್ವಿ ಶಾ
ಮುಂಬೈ , ಬುಧವಾರ, 19 ಜುಲೈ 2023 (09:31 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾದಲ್ಲಿ ಈಗ ಯಾರೂ ಸ್ನೇಹಿತರಲ್ಲ, ಎಲ್ಲರೂ ಸಹೋದ್ಯೋಗಿಗಳಷ್ಟೇ ಎಂದು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಹಿಂದೆ ಹೇಳಿದ್ದರು. ಆ ಹೇಳಿಕೆಯನ್ನು ಈಗ ಕ್ರಿಕೆಟಿಗ ಪೃಥ‍್ವಿ ಶಾ ಸಮರ್ಥಿಸಿಕೊಂಡಿದ್ದಾರೆ.

ಟೀಂ ಇಂಡಿಯಾದಲ್ಲಿ ಅವಕಾಶ ಸಿಗದೇ ಹತಾಶರಾಗಿರುವ ಪೃಥ‍್ವಿ ಶಾ ಮತ್ತೆ ಕಮ್ ಬ್ಯಾಕ್ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಈ ನಡುವೆ ಸಂದರ್ಶನವೊಂದರಲ್ಲಿ ನಿಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಟೀಂ ಇಂಡಿಯಾದ ಯಾವ ಆಟಗಾರನ ಬಳಿ ನೋವು ಹಂಚಿಕೊಳ್ಳುತ್ತೀರಿ ಎಂದು ಕೇಳಲಾಗಿದೆ.

ಇದಕ್ಕೆ ಉತ್ತರಿಸಿರುವ ಪೃಥ್ವಿ ‘ಎಲ್ಲರೂ ಪರಸ್ಪರ ಮಾತನಾಡುತ್ತೇವೆ. ಆದರೆ ಮನದಾಳ ಹಂಚಿಕೊಳ್ಳುವುದು ತೀರಾ ಕಡಿಮೆ. ನಾನು ಕೂಡಾ ಯಾರ ಜೊತೆಗೂ ನನ್ನ ಮನದಾಳದ ಮಾತು ಹಂಚಿಕೊಂಡಿಲ್ಲ. ನಾವೆಲ್ಲರೂ ಪರಸ್ಪರ ತಮಾಷೆ ಮಾಡುತ್ತೇವೆ, ನಗುತ್ತೇವೆ. ಆದರೆ ನಮ್ಮ ವೈಯಕ್ತಿಕ ವಿಚಾರಗಳು ನಮ್ಮ ಬಳಿಯೇ ಇರುತ್ತವೆ’ ಎಂದಿದ್ದಾರೆ. ಆ ಮೂಲಕ ಅಶ್ವಿನ್ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ ಮ್ಯಾನೇಜರ್, ರೋಹಿತ್ ಶರ್ಮಾ ಪತ್ನಿ ನಡುವಿನ ಬಾಂಧವ್ಯವೇನು?