Select Your Language

Notifications

webdunia
webdunia
webdunia
webdunia

ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣರನ್ನು ಪಾಕ್ ಬೌಲರ್ ಹ್ಯಾರಿಸ್ ರೌಫ್ ಗೆ ಹೋಲಿಸಿ ಟ್ರೋಲ್

ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣರನ್ನು ಪಾಕ್ ಬೌಲರ್ ಹ್ಯಾರಿಸ್ ರೌಫ್ ಗೆ ಹೋಲಿಸಿ ಟ್ರೋಲ್
ಗುವಾಹಟಿ , ಬುಧವಾರ, 29 ನವೆಂಬರ್ 2023 (10:20 IST)
Photo Courtesy: Twitter
ಗುವಾಹಟಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಪ್ರಸಿದ್ಧ ಕೃಷ್ಣ ದುಬಾರಿಯಾಗಿ ಪರಿಣಮಿಸಿದ್ದು, ಅವರೀಗ ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾ ಮುಗ್ಗಾ ಟ್ರೋಲ್ ಗೊಳಗಾಗಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಪ್ರಸಿದ್ಧ ನಾಲ್ಕು ಓವರ್ ಗಳ ಕೋಟಾದಲ್ಲಿ ಬರೋಬ್ಬರಿ 68 ರನ್ ನೀಡಿದ್ದರು. ಹಾಗಿದ್ದರೂ ಒಂದೇ ಒಂದು ವಿಕೆಟ್ ಕೀಳಲು ವಿಫಲರಾಗಿದ್ದರು. ಇದಕ್ಕೆ ಮೊದಲು ನಡೆದಿದ್ದ ಎರಡು ಟಿ20 ಪಂದ್ಯಗಳಲ್ಲೂ ಪ್ರಸಿದ್ಧ 4 ಓವರ್ ಗಳಲ್ಲಿ ತಲಾ 50 ಮತ್ತು 41 ರನ್ ನೀಡಿದ್ದರು.

ಹೀಗಾಗಿ ಪ್ರಸಿದ್ಧ ಕೃಷ್ಣರನ್ನು ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ. ಪ್ರಸಿದ್ಧ ಕೃಷ್ಣರನ್ನು ಪಾಕ್ ಬೌಲರ್ ಹ್ಯಾರಿಸ್ ರೌಫ್ ಗೆ ಹೋಲಿಸಿ ಟೀಕೆ ಮಾಡಲಾಗಿದೆ. ಹ್ಯಾರಿಸ್ ಕೂಡಾ ವಿಶ್ವಕಪ್ ಪಂದ್ಯಾವಳಿ ವೇಳೆ ಪಾಕ್ ಪಾಲಿಗೆ ದುಬಾರಿ ಬೌಲರ್ ಆಗಿದ್ದರು.

ಅಷ್ಟೇ ಅಲ್ಲದೆ, ನಿನ್ನೆಯ ಪಂದ್ಯ ಶ್ರೇಷ್ಠ ಆಸ್ಟ್ರೇಲಿಯಾ ಪರವಾಗಿ ಪ್ರಸಿದ್ಧ ಕೃಷ್ಣ ಎಂದು ಟ್ರೋಲ್ ಆಗಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಪ್ರಸಿದ್ಧ ನಿಯಂತ್ರಣ ಸಾಧಿಸಿದ್ದರೆ ಪಂದ್ಯವನ್ನು ಭಾರತವೇ ಗೆಲ್ಲುತ್ತಿತ್ತು. ಹೀಗಾಗಿ ಪ್ರಸಿದ್ಧ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಟಿ20: ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್ ವೆಲ್