Select Your Language

Notifications

webdunia
webdunia
webdunia
webdunia

Virat Kohli: ಡೆಲ್ಲಿ ತಂಡದ ಜೊತೆ ರಣಜಿ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಭ್ಯಾಸ: ಪೊಲೀಸರಿಗೆ ಹೊಸ ತಲೆನೋವು

Kohli Ranji match

Krishnaveni K

ನವದೆಹಲಿ , ಬುಧವಾರ, 29 ಜನವರಿ 2025 (12:13 IST)
Photo Credit: X
ದೆಹಲಿ: ರಣಜಿ ಟ್ರೋಫಿ ಆಡಲು ತಂಡದ ಜೊತೆಗೆ ಸಿದ್ಧತೆ ಆರಂಭಿಸಿರುವ ವಿರಾಟ್ ಕೊಹ್ಲಿಯಿಂದ ದೆಹಲಿ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ. ಅದೇನದು ಈ ಸ್ಟೋರಿ ನೋಡಿ.

ಬರೋಬ್ಬರಿ 12 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ರಣಜಿ ಟ್ರೋಫಿ ಪಂದ್ಯವಾಡುತ್ತಿದ್ದಾರೆ. ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನೆಂದರೆ ಅಭಿಮಾನಿಗಳ ಕ್ರೇಜ್ ಎಲ್ಲರಿಗೂ ಗೊತ್ತೇ ಇದೆ. ಕೊಹ್ಲಿ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವುದರಿಂದ ಸಾಕಷ್ಟು ಜನ ಮೈದಾನಕ್ಕೆ ಬರುತ್ತಿದ್ದಾರೆ.

ವಿಶೇಷವಾಗಿ ಮಾಧ್ಯಮ ಪ್ರತಿನಿಧಿಗಳು, ಕ್ಯಾಮರಾ ಮ್ಯಾನ್ ಗಳೂ ಸಾಕಷ್ಟು ಸಂಖ್ಯೆಯಲ್ಲಿ ಅರುಣ್ ಜೇಟ್ಲಿ ಮೈದಾನಕ್ಕೆ ಬಂದಿದ್ದಾರೆ. ಹೇಗಿದ್ದರೂ ರಣಜಿ ಪಂದ್ಯವಷ್ಟೇ ಅಲ್ವಾ ಎಂದು ಪೊಲೀಸರು ಸೀಮಿತ ಸಂಖ್ಯೆಯಲ್ಲಿ ಬಂದು ಭದ್ರತೆ ನೀಡಿದ್ದರು.

ಆದರೆ ಕೊಹ್ಲಿಯನ್ನು ನೋಡಲು ಜನರ ದಂಡೇ ಬರುತ್ತಿರುವುದು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಈ ಹಿನ್ನಲೆಯಲ್ಲಿ ಅಲ್ಲಿದ್ದ ಪೊಲೀಸರು ಹೆಚ್ಚುವರಿ ಸಿಬ್ಬಂದಿಗಳನ್ನು ಕಳುಹಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಬೇಕಾಗಿ ಬಂದಿದೆ.

ಇನ್ನು, ವಿರಾಟ್ ಆಡಲಿರುವ ರಣಜಿ ಪಂದ್ಯದ ನೇರಪ್ರಸಾರವಿಲ್ಲ ಎಂದು ಈ ಮೊದಲು ಸುದ್ದಿಯಾಗಿತ್ತು. ಆದರೆ ಈಗ ವಿರಾಟ್ ಆಡುತ್ತಿರುವ ಕಾರಣಕ್ಕೆ ದೆಹಲಿ ಪಂದ್ಯದ ಬಗ್ಗೆ ಕ್ರೇಜ್ ಹೆಚ್ಚಾಗಿರುವ ಹಿನ್ನಲೆಯಲ್ಲಿ ಜಿಯೋ ಸಿನಿಮಾ ನೇರ ಪ್ರಸಾರ ನೀಡಲು ನಿರ್ಧರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯ ಸೋಲು, ಗಂಭೀರ್ ಗೆ ಕೋಚಿಂಗ್ ಮಾಡಕ್ಕೇ ಬರಲ್ಲ