ಪ್ರಧಾನಿ ಭೇಟಿಗೆ ಸಿದ್ಧರಾದ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟಿಗರು: ಮೋದಿಗೆ ಏನು ಗಿಫ್ಟ್ ಕೊಡಲಿದ್ದಾರೆ

Krishnaveni K
ಬುಧವಾರ, 5 ನವೆಂಬರ್ 2025 (09:24 IST)
ನವದೆಹಲಿ: ಏಕದಿನ ವಿಶ್ವಕಪ್ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಇಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದೆ. ಪ್ರಧಾನಿಗೆ ಮಹಿಳಾ ತಾರೆಯರು ಏನು ಗಿಫ್ಟ್ ನೀಡುತ್ತಾರೆ ಇಲ್ಲಿದೆ ಮಾಹಿತಿ.

ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್ ಗಳಿಂದ ಸೋಲಿಸಿದ ಮಹಿಳಾ ಕ್ರಿಕೆಟಿಗರು ಇತಿಹಾಸ ನಿರ್ಮಿಸಿದ್ದರು. ಇದೀಗ ಪುರುಷ ಕ್ರಿಕೆಟಿಗರಂತೇ ಮಹಿಳಾ ಕ್ರಿಕೆಟಿಗರನ್ನೂ ಭೇಟಿ ಮಾಡಲು ಪ್ರಧಾನಿ ಕಚೇರಿಯಿಂದಲೇ ಅಧಿಕೃತ ಆಹ್ವಾನ ಬಂದಿದೆ.

ಇದಕ್ಕಾಗಿ ನಿನ್ನೆಯೇ ಮಹಿಳಾ ತಾರೆಯರು ದೆಹಲಿಗೆ ಬಂದಿಳಿದಿದ್ದಾರೆ. ದೆಹಲಿಗೆ ಬಂದಿಳಿದ ಆಟಗಾರರಿಗೆ ಭರ್ಜರಿ ಸ್ವಾಗತ ನೀಡಲಾಗಿದೆ. ಇಂದು ಪ್ರಧಾನಿ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಕ್ರಿಕೆಟಿಗರ ಜೊತೆ ಪ್ರಧಾನಿ ಮೋದಿ ಸಂವಾದವನ್ನೂ ನಡೆಸಲಿದ್ದಾರೆ.

ಇನ್ನು, ಪ್ರಧಾನಿ ಮೋದಿಗೆ ಉಡುಗೊರೆಯನ್ನು ನೀಡುವುದಾಗಿ ಕ್ರಿಕೆಟ್ ಆಟಗಾರ್ತಿ ದೀಪ್ತಿ ಶರ್ಮಾ ಹೇಳಿದ್ದಾರೆ. ಪ್ರಧಾನಿ ಭೇಟಿ ವೇಳೆ ಏನಾದರೂ ಉಡುಗೊರೆ ಖಂಡಿತಾ ನೀಡಲಿದ್ದೇವೆ. ಏನು ನೀಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಸಹಿ ಹಾಕಿ ಬ್ಯಾಟ್, ಟಿ ಶರ್ಟ್ ಏನಾದರೂ ಒಂದು ಸ್ಮರಣೀಯವಾಗಿರುವ ಉಡುಗೊರೆ ಖಂಡಿತಾ ನೀಡಲಿದ್ದೇವೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli birthday: ಎಂಜಿ ರೋಡ್ ನಲ್ಲಿ ಮೊದಲು ಟ್ಯಾಟೂ ಹಾಕಿಸಿದ್ದ ಕೊಹ್ಲಿ ಆಮೇಲೆ ಮುಚ್ಚಿಟ್ಟಿದ್ದು ಯಾಕೆ

ತಿಲಕ ಬೇಡ ಎಂದ ಸ್ಮೃತಿ ಮಂಧಾನ: ಯಾಕೆ ಹೀಗೆ ನೆಟ್ಟಿಗರ ಪ್ರಶ್ನೆ: video

ಜಯ್ ಶಾ ಎಂದ್ರೆ ಸುಮ್ನೇ ಅಲ್ಲ, ಮಹಿಳಾ ಕ್ರಿಕೆಟ್ ತಾರೆಯರಿಗೆ ಇದಕ್ಕೇ ಜಯ್ ಶಾ ಮೆಲೆ ಪ್ರೀತಿ

ಪ್ರಧಾನಿ ಭೇಟಿಗೆ ಸಿದ್ಧರಾದ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟಿಗರು: ಮೋದಿಗೆ ಏನು ಗಿಫ್ಟ್ ಕೊಡಲಿದ್ದಾರೆ

ಹರ್ಮನ್ ಪ್ರೀತ್ ಕೌರ್ ಪಡೆಗಿಲ್ಲ ವಿಕ್ಟರಿ ಪೆರೇಡ್ ಭಾಗ್ಯ: ಇದಕ್ಕೆಲ್ಲಾ ಬೆಂಗಳೂರೇ ಕಾರಣ

ಮುಂದಿನ ಸುದ್ದಿ
Show comments