ಹಳೇ ವಿಚಾರ ಹೇಳಿ ಹರ್ಲಿನ್ ಡಿಯೋಲ್ ಗೇ ಅಚ್ಚರಿ ನೀಡಿದ ಪ್ರಧಾನಿ ಮೋದಿ

Krishnaveni K
ಬುಧವಾರ, 5 ನವೆಂಬರ್ 2025 (20:59 IST)
Photo Credit: X
ನವದೆಹಲಿ: ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡ ಇಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದೆ. ಈ ವೇಳೆ ಕ್ರಿಕೆಟ್ ಆಟಗಾರ್ತಿ ಹರ್ಲಿನ್ ಡಿಯೋಲ್ ಹಳೇ ವಿಚಾರವೊಂದನ್ನು ಹೇಳಿ ಅವರೇ ಅಚ್ಚರಿಯಾಗುವಂತೆ ಮಾಡಿದ್ದಾರೆ.

ತಮ್ಮ ನಿವಾಸಕ್ಕೆ ಭೇಟಿ ನೀಡಿದ ಕ್ರಿಕೆಟ್ ಆಟಗಾರ್ತಿಯರ ಜೊತೆ ಮೋದಿ ರೌಂಡ್ ಟೇಬಲ್ ಸಂವಾದ ನಡೆಸಿದ್ದಾರೆ. ಈ ವೇಳೆ ನಾಯಕಿ ಹರ್ಮನ್ ಪ್ರೀತ್ ಕೌರ್ ನೀವು ಹೇಗೆ ಯಾವಾಗಲೂ ಪ್ರಸ್ತುತವಾಗಿರುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಮೋದಿ ನನಗೆ ಇದು ಅಭ್ಯಾಸವಾಗಿದೆ ಎಂದಿದ್ದಾರೆ.

ಈ ವೇಳೆ ಹರ್ಲಿನ್ ಡಿಯೋಲ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಿಡಿದ ಅದ್ಭುತ ಕ್ಯಾಚ್ ಬಗ್ಗೆ ಮೋದಿ ಪ್ರಸ್ತಾಪಿಸುತ್ತಾರೆ. ಆ ಕ್ಯಾಚ್ ವಿಡಿಯೋವನ್ನು ಸ್ವತಃ ಮೋದಿ ಅಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಮೋದಿ ಈ ಬಗ್ಗೆ ಪ್ರಸ್ತಾಪಿಸಿದಾಗ ಹರ್ಲಿನ್ ಅಚ್ಚರಿಗೊಳಗಾದರು.

ಇನ್ನು, ಫೈನಲ್ ನಲ್ಲಿ ಕೊನೆಯ ಕ್ಯಾಚ್ ಹಿಡಿದಿದ್ದ ಹರ್ಮನ್ ಆ ಬಾಲ್ ನ್ನು ತಮ್ಮ ಪಾಕೆಟ್ ಒಳಗೆ ಹಾಕಿಕೊಂಡಿದ್ದನ್ನು ಮೋದಿ ಕೇಳಿದರು. ಅದಕ್ಕೆ ಹರ್ಮನ್ ಆ ಬಾಲ್ ಹಿಡಿಯುವ ಅವಕಾಶ ಸಿಕ್ಕಿದ್ದು ಅದೃಷ್ಟ ಎಂದರು. ಇನ್ನು, ಅಮನ್ ಜೋತ್ ಕೌರ್ ಕ್ಯಾಚ್ ಬಗ್ಗೆಯೂ ಮೋದಿ ಕೊಂಡಾಡಿದ್ದಾರೆ. ಬಹುಶಃ ಆ ಕ್ಯಾಚ್ ಹಿಡಿಯುವಾಗ ನಿಮ್ಮ ಕಣ್ಣಲ್ಲಿ ಟ್ರೋಫಿ ಇದ್ದಿರಬಹುದು ಎಂದು ತಮಾಷೆ ಮಾಡಿದ್ದಾರೆ.

ಇನ್ನು, ಬೌಲರ್ ಕ್ರಾಂತಿ ಗೌಡ್ ನನ್ನ ಸಹೋದರ ನಿಮ್ಮ ದೊಡ್ಡ ಫ್ಯಾನ್ ಎಂದು ಹೇಳಿದ್ದಾರೆ. ಇದಕ್ಕೆ ಒಂದು ದಿನ ಅವರನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದಲ್ಲದೆ ಈ ವೇಳೆ ಕ್ರಿಕೆಟಿಗರಿಗೆ ಫಿಟ್ ಇಂಡಿಯಾ ಅಭಿಯಾನವನ್ನು ಪ್ರಚುರಪಡಿಸುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ, ಬೊಜ್ಜಿನ ಸಮಸ್ಯೆ ಬಗ್ಗೆ, ಹೇಗೆ ಫಿಟ್ ಆಗಿರಬೇಕು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ನೀವೆಲ್ಲರೂ ನಿಮ್ಮ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಸ್ಪೂರ್ತಿ ತುಂಬಿ ಎಂದು ಸಲಹೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಶ್ವ ಚಾಂಪಿಯನ್ ಆದ ಮಹಿಳಾ ಕ್ರಿಕೆಟಿಗರನ್ನು ಭೇಟಿಯಾದ ಮೋದಿ: ಟ್ರೋಫಿ ಜೊತೆಗೆ ಪೋಸ್

Virat Kohli birthday: ಎಂಜಿ ರೋಡ್ ನಲ್ಲಿ ಮೊದಲು ಟ್ಯಾಟೂ ಹಾಕಿಸಿದ್ದ ಕೊಹ್ಲಿ ಆಮೇಲೆ ಮುಚ್ಚಿಟ್ಟಿದ್ದು ಯಾಕೆ

ತಿಲಕ ಬೇಡ ಎಂದ ಸ್ಮೃತಿ ಮಂಧಾನ: ಯಾಕೆ ಹೀಗೆ ನೆಟ್ಟಿಗರ ಪ್ರಶ್ನೆ: video

ಜಯ್ ಶಾ ಎಂದ್ರೆ ಸುಮ್ನೇ ಅಲ್ಲ, ಮಹಿಳಾ ಕ್ರಿಕೆಟ್ ತಾರೆಯರಿಗೆ ಇದಕ್ಕೇ ಜಯ್ ಶಾ ಮೆಲೆ ಪ್ರೀತಿ

ಪ್ರಧಾನಿ ಭೇಟಿಗೆ ಸಿದ್ಧರಾದ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟಿಗರು: ಮೋದಿಗೆ ಏನು ಗಿಫ್ಟ್ ಕೊಡಲಿದ್ದಾರೆ

ಮುಂದಿನ ಸುದ್ದಿ
Show comments