ವಿಶ್ವಕಪ್ ಟ್ರೋಫಿ ಮುಟ್ಟದೇ ಪೋಸ್ ಕೊಟ್ಟ ಮೋದಿ: ಪ್ರಧಾನಿಗೆ ಕ್ರಿಕೆಟಿಗರು ಕೊಟ್ಟ ಗಿಫ್ಟ್ ಏನು

Krishnaveni K
ಬುಧವಾರ, 5 ನವೆಂಬರ್ 2025 (20:38 IST)
Photo Credit: X
ನವದೆಹಲಿ: ಏಕದಿನ ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಇಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದೆ. ಈ ವೇಳೆ ಫೋಟೋಗೆ ಪೋಸ್ ನೀಡುವಾಗ ಮೋದಿ ತಪ್ಪಿಯೂ ಟ್ರೋಫಿಯನ್ನು ಮುಟ್ಟಿಲ್ಲ. ಇನ್ನು, ಕ್ರಿಕೆಟಿಗರು ಮೋದಿಗೆ ಕೊಟ್ಟ ಗಿಫ್ಟ್ ಏನು ಇಲ್ಲಿದೆ ನೋಡಿ ವಿವರ.

ವಿಶ್ವಕಪ್ ಟ್ರೋಫಿ ಎನ್ನುವುದು ಕ್ರಿಕೆಟಿಗರ ಶ್ರಮದ ಫಲ. ಹೀಗಾಗಿ ಮೋದಿ ಅದನ್ನು ಹಿಡಿದುಕೊಳ್ಳಲಿಲ್ಲ. ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂಧಾನ ಟ್ರೋಫಿಯನ್ನು ಪ್ರಧಾನಿ ಮೋದಿ ಮುಂದೆ ಹಿಡಿದು ನಿಂತರು. ಟ್ರೋಫಿ ಮುಂದೆ ಮೋದಿ ಕೈ ಕಟ್ಟಿ ನಿಂತು ಪೋಸ್ ನೀಡಿದ್ದಾರೆ.

Photo Credit: X
ಇನ್ನು, ಕ್ರಿಕೆಟಿಗರೂ ಮೋದಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ವಿಶ್ವ ವಿಜೇತ ತಂಡದ ಎಲ್ಲಾ ಸದಸ್ಯರ ಸಹಿಯನ್ನು ಒಳಗೊಂಡ ‘ನಮೋ’ ಹೆಸರಿನ ಟೀಂ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಹಿಂದೆ ಪುರುಷ ಕ್ರಿಕೆಟಿಗರು ಟಿ20 ವಿಶ್ವಕಪ್ ಗೆದ್ದಾಗ ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಆಟಗಾರರಿಗೆ ಆತಿಥ್ಯ ನೀಡಿದ್ದರು. ಇದೀಗ ಮಹಿಳಾ ತಾರೆಯರಿಗೂ ಅದೇ ಜಾಗದಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ಟೀಂ ಇಂಡಿಯಾಗೆ ಸರಣಿ ಮುನ್ನಡೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಗಿಫ್ಟ್ ಕೊಟ್ಟ ಮಹಿಳಾ ಕ್ರಿಕೆಟಿಗರು video

ಐಪಿಎಲ್ 2026: ಧೋನಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟ ಹರ್ಲೀನ್ ಡಿಯೋಲ್ ಪ್ರಶ್ನೆಗೆ ಎಲ್ಲರಿಗೂ ನಗು

ವಿಶ್ವಕಪ್‌ ಗೆದ್ದ ಚಾರಿತ್ರಿಕ ಸಾಧನೆ ಮೆರೆದ ಭಾರತದ ವನಿತೆಯರಿಗೆ ಟಾಟಾ ಸಂಸ್ಥೆಯಿಂದ ಭರ್ಜರಿ ಗಿಫ್ಟ್‌

ಮುಂದಿನ ಸುದ್ದಿ
Show comments