Publish Date: Mon, 20 Nov 2023 (09:14 IST)
Updated Date: Mon, 20 Nov 2023 (09:17 IST)
ನವದೆಹಲಿ: ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋತು ಆಘಾತಕ್ಕೀಡಾಗಿರುವ ಟೀಂ ಇಂಡಿಯಾಗೆ ಪ್ರಧಾನಿ ಮೋದಿ ವಿಶೇಷ ಸಂದೇಶದ ಮೂಲಕ ಸಾಂತ್ವನ ಹೇಳಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಸಮಾರೋಪ ಸಮಾರಂಭದಲ್ಲಿ ಸ್ವತಃ ಪ್ರಧಾನಿ ಮೋದಿ ಉಪಸ್ಥಿತರಿದ್ದರು. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕ್ಯುಮಿನ್ಸ್ ಗೆ ಪ್ರಧಾನಿ ಮೋದಿ ವಿಶ್ವಕಪ್ ಹಸ್ತಾಂತರಿಸಿದ್ದಾರೆ.
ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಹಾಗೂ ನಿನ್ನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಆದರೆ ಬಳಿಕ ಟೀಂ ಇಂಡಿಯಾಗೆ ಸಾಂತ್ವನ ಹೇಳುವುದನ್ನು ಮರೆತಿಲ್ಲ. ಇಡೀ ಟೂರ್ನಮಂಟ್ ನಲ್ಲಿ ನೀವು ಆಡಿದ ರೀತಿ ನಮಗೆ ಸ್ಪೂರ್ತಿ. ನೀವು ನಮಗೆಲ್ಲರಿಗೂ ಹೆಮ್ಮೆ ತಂದಿದ್ದೀರಿ. ಇಂದು, ಮುಂದೆಂದೂ ನಾವು ನಿಮ್ಮ ಜತೆಗಿರುತ್ತೇವೆ ಎಂದು ಪ್ರಧಾ ಮೋದಿ ಧೈರ್ಯ ಹೇಳಿದ್ದಾರೆ.