Select Your Language

Notifications

webdunia
webdunia
webdunia
webdunia

ಐಸಿಸಿ ಟೂರ್ನಮೆಂಟ್ ಬಂದರೆ ವಿರಾಟ್ ಕೊಹ್ಲಿಯನ್ನು ಪಂಜುರ್ಲಿ ಏಳಿಸ್ತದೆ: ವಿಡಿಯೋ ನೋಡಿ

Virat Kohli

Krishnaveni K

ದುಬೈ , ಗುರುವಾರ, 20 ಫೆಬ್ರವರಿ 2025 (11:33 IST)
ದುಬೈ: ಐಸಿಸಿ ಟೂರ್ನಮೆಂಟ್ ಬಂದರೆ ಕಳೆಗುಂದಿರುವ ವಿರಾಟ್ ಕೊಹ್ಲಿಯನ್ನು ಪಂಜುರ್ಲಿಯೇ ಎಬ್ಬಿಸ್ತದೆ. ಹೀಗಂತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಈಗ ಮೊದಲಿನ ಫಾರ್ಮ್ ನಲ್ಲಿಲ್ಲ. ಆದರೆ ಐಸಿಸಿ ಟೂರ್ನಮೆಂಟ್ ನಲ್ಲಿ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಕಪ್ ಗೆಲ್ಲದೇ ಹೋದರೂ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಇದಕ್ಕೆ ಕಳೆದ ಟಿ20 ವಿಶ್ವಕಪ್ ಕೂಡಾ ಉದಾಹರಣೆ. ಫೈನಲ್ ವರೆಗೂ ಕೊಹ್ಲಿ ಕಳಪೆ ಆಟವಾಡಿದ್ದರು. ಆದರೆ ಫೈನಲ್ ನಲ್ಲಿ ತಂಡಕ್ಕೆ ಅಗತ್ಯವಿದ್ದಾಗ ಅರ್ಧಶತಕ ಸಿಡಿಸಿದ್ದರು. ಈಗ ಅವರ ಅಭಿಮಾನಿಗಳೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿ ಮೊದಲಿನ ಫಾರ್ಮ್ ಗೆ ಬರಲಿದ್ದಾರೆ ಎಂಬ ನಂಬಿಕೆಯಲ್ಲಿದ್ದಾರೆ.

ಈ ನಡುವೆ ಅಭಿಮಾನಿಗಳು ವಿಡಿಯೋವೊಂದನ್ನು ಹರಿಯಬಿಟ್ಟಿದ್ದಾರೆ. ಕಾಂತಾರ ಸಿನಿಮಾದ ಪಂಜುರ್ಲಿ ಕ್ಲೈಮ್ಯಾಕ್ಸ್ ಸಿನಿಮಾದಲ್ಲಿರುವಂತೆ ಮಲಗಿದ್ದ ಕೊಹ್ಲಿಯನ್ನು ಎಬ್ಬಿಸುವಂತೆ ವಿಡಿಯೋವೊಂದನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದ್ದು ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

IND vs BAN: ಟೀಂ ಇಂಡಿಯಾದ ಮೊದಲ ಪಂದ್ಯ ಇಂದು, ಎಲ್ಲಿ ಲೈವ್ ವೀಕ್ಷಿಸಬೇಕು