Publish Date: Thu, 21 Feb 2019 (10:32 IST)
Updated Date: Thu, 21 Feb 2019 (10:36 IST)
ಬೆಂಗಳೂರು: ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಉಗ್ರರ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಸಂಪೂರ್ಣ ಹಳಸಿದ್ದು, ದೇಶದ ವಿವಿಧ ಮೈದಾನಗಳಿಂದ ಪಾಕ್ ನ ಮಾಜಿ ದಿಗ್ಗಜ ಕ್ರಿಕೆಟಿಗರ ಫೋಟೋಗಳನ್ನು ಕಿತ್ತು ಹಾಕಲಾಗುತ್ತಿದೆ.
ಮೊಹಾಲಿ, ಜೈಪುರ, ನಾಗ್ಪುರ ಮೈದಾನಗಳಿಂದ ಈಗಾಗಲೇ ಪಾಕ್ ಕ್ರಿಕೆಟಿಗರಾದ ಇಮ್ರಾನ್ ಖಾನ್, ಜಾವೇದ್ ಮಿಯಾಂದಾದ್, ಶಾಹಿದ್ ಅಫ್ರಿದಿ ಮುಂತಾದ ಕ್ರಿಕೆಟಿಗರ ಫೋಟೋಗಳನ್ನು ಕಿತ್ತು ಹಾಕಲಾಗಿದೆ.
ಇದೀಗ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಗೋಡೆಗಳಲ್ಲಿದ್ದ ಪಾಕಿಸ್ತಾನದ ಶ್ರೇಷ್ಠ ಕ್ರಿಕೆಟಿಗರ ಫೋಟೋಗಳಿಗೂ ಗೇಟ್ ಪಾಸ್ ನೀಡಲಾಗಿದೆ. ಇಲ್ಲಿಯ ಗೋಡೆಗಳಲ್ಲಿ ಭಾರತ ಸೇರಿದಂತೆ ವಿಶ್ವದ ಸಾಧಕ ಕ್ರಿಕೆಟಿಗರ ಫೋಟೋಗಳನ್ನು ತೂಗು ಹಾಕಲಾಗಿತ್ತು. ಆದರೆ ಇದೀಗ ಪಾಕ್ ಆಟಗಾರರ ಫೋಟೋಗಳನ್ನು ಕಿತ್ತು ಹಾಕಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ