Publish Date: Fri, 12 May 2023 (18:46 IST)
Updated Date: Fri, 12 May 2023 (18:48 IST)
ಮುಂಬೈ: ಈ ಬಾರಿ ಏಕದಿನ ವಿಶ್ವಕಪ್ ಟೂರ್ನಿ ಭಾರತದಲ್ಲೇ ನಡೆಯಲಿದ್ದು, ಪಂದ್ಯ ನಡೆಯಲಿರುವ ತಾಣಗಳು ಫೈನಲ್ ಆಗಿವೆ.
ಒಟ್ಟು 12 ಮೈದಾನಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ ನಿಂದ ನವಂಬರ್ ವರೆಗೆ ಪಂದ್ಯಗಳು ನಡೆಯಲಿವೆ.
ಕೋಲ್ಕೊತ್ತಾದ ಈಡನ್ ಗಾರ್ಡನ್, ವಾಂಖೆಡೆ ಕ್ರೀಡಾಂಗಣ ಮುಂಬೈ, ರಾಜ್ ಕೋಟ್, ಧರ್ಮಶಾಲಾ, ಇಂಧೋರ್, ರಾಯ್ಪುರ, ಗುವಾಹಟಿ, ಹೈದರಾಬಾದ್, ಅಹಮ್ಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿಯಲ್ಲಿ ಪಂದ್ಯಗಳು ನಡೆಯಲಿವೆ.