ಮುಂಬೈ: ಐಪಿಎಲ್ 14 ರ ಪಂದ್ಯಾವಳಿಗಳು ಮುಗಿಯುವ ಮೊದಲೇ ಐಪಿಎಲ್ 15 ಕ್ಕೆ ಬಿಸಿಸಿಐ ತಯಾರಿ ಆರಂಭಿಸಿದೆ.
ಮುಂದಿನ ವರ್ಷದ ಆವೃತ್ತಿಗೆ ಹೊಸ ಎರಡು ತಂಡಗಳನ್ನು ಸೇರ್ಪಡೆಗೊಳಿಸಲು ಬಿಸಿಸಿಐ ತೀರ್ಮಾನಿಸಿದೆ. ಇದಕ್ಕಾಗಿ ಆಗಸ್ಟ್ ನಲ್ಲಿ ಬಿಡ್ಡಿಂಗ್ ನಡೆಸುವ ಸಾಧ‍್ಯತೆಯಿದೆ.
ಜೊತೆಗೆ ಹೊಸ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ ನಲ್ಲಿ ನಡೆಯಲಿದೆ. ಈ ಬಾರಿ ನಾಲ್ವರು ಮೂಲ ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಗಿದೆ. ಈ ಬಾರಿ ಮೆಗಾ ಆಕ್ಷನ್ ನಡೆಯಲಿದ್ದು, ಹೆಚ್ಚಿನ ಆಟಗಾರರು ಬೇರೆ ಬೇರೆ ಫ್ರಾಂಚೈಸಿ ಕೂಡಿಕೊಳ್ಳುವುದು ಪಕ್ಕಾ ಆಗಿದೆ.