Select Your Language

Notifications

webdunia
webdunia
webdunia
webdunia

ಬ್ಯಾಟಿಂಗ್ ನಲ್ಲಿ ಥೇಟ್ ಅಪ್ಪನೇ! ದ್ರಾವಿಡ್ ಪುತ್ರನ ಬ್ಯಾಟಿಂಗ್ ಗೆ ನೆಟ್ಟಿಗರು ಫಿದಾ

ಬ್ಯಾಟಿಂಗ್ ನಲ್ಲಿ ಥೇಟ್ ಅಪ್ಪನೇ! ದ್ರಾವಿಡ್ ಪುತ್ರನ ಬ್ಯಾಟಿಂಗ್ ಗೆ ನೆಟ್ಟಿಗರು ಫಿದಾ
ಬೆಂಗಳೂರು , ಗುರುವಾರ, 21 ಡಿಸೆಂಬರ್ 2023 (10:50 IST)
Photo Courtesy: Twitter
ಬೆಂಗಳೂರು: ಟೀಂ ಇಂಡಿಯಾ ‘ವಾಲ್’ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಈಗ ಅಂಡರ್ 19 ತಂಡದಲ್ಲಿ ಮಿಂಚುತ್ತಿದ್ದಾರೆ.

ಕೂಚ್ ಬೆಹರ್ ಟ್ರೋಫಿ ಅಂಡರ್ 19 ಟೂರ್ನಮೆಂಟ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ದ್ರಾವಿಡ್ ಪುತ್ರ ಸಮಿತ್ ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. 98 ರನ್ ಜೊತೆಗೆ 2 ವಿಕೆಟ್ ಕಬಳಿಸಿ ಆಲ್ ರೌಂಡರ್ ಆಟ ಪ್ರದರ್ಶಿಸಿದ್ದಾರೆ.

ದ್ರಾವಿಡ್ ಪುತ್ರನ ಬ್ಯಾಟಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಮಿತ್ ಬ್ಯಾಟಿಂಗ್ ನೋಡುತ್ತಿದ್ದರೆ ದ್ರಾವಿಡ್ ಶೈಲಿಯನ್ನೇ ಹೋಲುತ್ತದೆ. ತಾಂತ್ರಿಕವಾಗಿ ಸ್ಟ್ರಾಂಗ್ ಇದ್ದಾರೆ ಎಂದು ನೋಡಿದರೇ ಗೊತ್ತಾಗುತ್ತದೆ.

ಸಮಿತ್ ಬ್ಯಾಟಿಂಗ್ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ವಾವ್ ಎಂದಿದ್ದಾರೆ. ಮುಂದೊಂದು ದಿನ ಆತ ಟೀಂ ಇಂಡಿಯಾದಲ್ಲಿ ಆಡುವುದು ಪಕ್ಕಾ ಎಂದಿದ್ದಾರೆ. ದ್ರಾವಿಡ್ ರಂತೇ ಕವರ್ ಡ್ರೈವ್, ಫಾರ್ವರ್ಡ್ ಬಂದು ಡಿಫೆನ್ಸ್ ಮಾಡುವ ಶೈಲಿ ಸಮಿತ್ ನಲ್ಲಿದೆ. ಸಮಿತ್ ಆಟ ನೋಡುತ್ತಿದ್ದರೆ ಜ್ಯೂನಿಯರ್ ವಾಲ್ ಎನಿಸುತ್ತಿದೆ ಎಂದಿದ್ದಾರೆ ನೆಟ್ಟಿಗರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಮಹಿಳೆಯರ ಟೆಸ್ಟ್: ಆಸೀಸ್ ಗೆ ಆರಂಭಿಕ ಆಘಾತವಿಕ್ಕಿದ ಹರ್ಮನ್ ಪ್ರೀತ್ ಪಡೆ