ಮುಂಬೈ: ಇಂಗ್ಲೆಂಡ್ ಬಳಿಕ ಇದೀಗ ಆಸ್ಟ್ರೇಲಿಯಾ ವಿರುದ್ಧ ಮಹಿಳೆಯರ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಇಂದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ಗೆ ಭಾರತೀಯ ಪಡೆ ಆರಂಭಿಕ ಆಘಾತ ನೀಡಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಆಸೀಸ್ ನ ಎರಡು ಪ್ರಮುಖ ವಿಕೆಟ್ ಗಳನ್ನು ಆರಂಭದಲ್ಲೇ ಕೆಡವಿದ ಭಾರತ ಆಘಾತ ನೀಡಿದೆ. ಇತ್ತೀಚೆಗಿನ ವರದಿ ಬಂದಾಗ ಆಸೀಸ್ 2 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ.
ಆರಂಭಿಕರಾಗಿ ಕಣಕ್ಕಿಳಿದ ಲಿಚ್ ಫೀಲ್ಡ್ ಅವರನ್ನು ಜೆಮಿಮಾ ರೊಡ್ರಿಗಸ್ ಮತ್ತು ವಿಕೆಟ್ ಕೀಪರ್ ಯಶಿಕಾ ಭಾಟಿಯಾ ಅದ್ಭುತವಾಗಿ ಶೂನ್ಯಕ್ಕೇ ರನೌಟ್ ಮಾಡಿದರು. ಇನ್ನು, ಸ್ಟಾರ್ ಆಟಗಾರ್ತಿ ಎಲ್ಸಿ ಪೆರಿ ವಿಕೆಟ್ ನ್ನು ಪೂಜಾ ವಸ್ತ್ರಾಕರ್ ಕಬಳಿಸಿದರು. ಅವರು 4 ರನ್ ಗಳಿಸಿದ್ದರು.
ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ತಹ್ಲಿಯಾ ಮೆಗ್ರಾತ್ ಬಿರುಸಿನ ಆಟವಾಡುತ್ತಿದ್ದು, ಕೇವಲ 17 ಎಸೆತಗಳಿಂದ 24 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇನ್ನೊಂದು ತುದಿಯಲ್ಲಿ ಆರಂಭಿಕ ಬೆತ್ ಮೂನಿ 8 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.