ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಭಾರತ-ದ.ಆಫ್ರಿಕಾ ನಡುವಿನ ಐದನೇ ಟಿ20 ಪಂದ್ಯದ ವೇಳೆ ತಮ್ಮ ಜೊತೆ ಸೆಲ್ಫೀ ತೆಗೆಯಲು ಬಂದಾಗ ಮೈದಾನ ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿದ ಋತುರಾಜ್ ಗಾಯಕ್ ವಾಡ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಮಳೆ ಬಂದು ಆಟಗಾರರು ಡಗ್ ಔಟ್ ನಲ್ಲಿ ಕುಳಿತಿದ್ದಾಗ ಮೈದಾನ ಸಿಬ್ಬಂದಿಯೊಬ್ಬರು ಋತುರಾಜ್ ಗಾಯಕ್ ವಾಡ್ ಬಳಿ ಬಂದು ಸೆಲ್ಫೀ ಕೇಳಿದ್ದಾರೆ. ಈ ವೇಳೆ ತನ್ನ ಪಕ್ಕ ಸೆಲ್ಫೀಗೆ ಕೂತ ಮೈದಾನ ಸಿಬ್ಬಂದಿಯನ್ನು ಋತುರಾಜ್ ಗಾಯಕ್ ವಾಡ್ ನೂಕಿದ್ದಾರೆ.
ಆದರೂ ಮೈದಾನ ಸಿಬ್ಬಂದಿ ಸೆಲ್ಫೀ ತೆಗೆಯಲು ಯತ್ನಿಸಿದಾಗ ಅತ್ತ ಕಡೆ ತಿರುಗಿಯೂ ನೋಡದೆ ಋತುರಾಜ್ ಬೇಕೆಂದೇ ಪಕ್ಕದಲ್ಲಿದ್ದ ಆಟಗಾರನೊಂದಿ ತಮಾಷೆ ಮಾಡುತ್ತಾ ಕೂತಿದ್ದರು. ಋತುರಾಜ್ ವರ್ತನೆಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದ್ದು, ದಿಗ್ಗಜ ಆಟಗಾರರೇ ಮೈದಾನ ಸಿಬ್ಬಂದಿಗಳನ್ನು ಗೌರವದಿಂದ ನೋಡಿಕೊಳ್ಳುತ್ತಾರೆ. ಆದರೆ ಈ ಯುವ ಆಟಗಾರ ಕೊಬ್ಬು ತೋರಿಸಿರುವುದು ಎಷ್ಟು ಸರಿ ಎಂದು ಆಕ್ರೋಶ ಹೊರಹಾಕಿದ್ದಾರೆ.