ಮುಂಬೈ: ಟೀಂ ಇಂಡಿಯಾ ಈಗ ಎರಡು ತಂಡವಾಗಿ ಏಕಕಾಲಕ್ಕೆ ಎರಡು ಕ್ರಿಕೆಟ್ ಸರಣಿಗಳಲ್ಲಿ ಪಾಲ್ಗೊಳ್ಳುತ್ತಿದೆ. ಸದ್ಯಕ್ಕೆ ಯುವ ಆಟಗಾರರು ಮಾತ್ರ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದಾರೆ.
ಆದರೆ ಹಿರಿಯ ಆಟಗಾರರು ತಂಡಕ್ಕೆ ಬಂದ ಮೇಲೆ ಕೆಲವು ಆಟಗಾರರು ಅನಿವಾರ್ಯವಾಗಿ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಈ ಪೈಕಿ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಋತುರಾಜ್ ಗಾಯಕ್ ವಾಡ್, ಹರ್ಷಲ್ ಪಟೇಲ್ ಸೇರಿದ್ದಾರೆ.
ಶ್ರೇಯಸ್ ಅವಕಾಶ ಸಿಕ್ಕರೂ ಅದಕ್ಕೆ ಆಟವಾಡಿಲ್ಲ. ಆದರೆ ಇಶಾನ್, ಋತುರಾಜ್ ಗಾಯಕ್ ವಾಡ್ ಮತ್ತು ಹರ್ಷಲ್ ಪಟೇಲ್ ಉತ್ತಮ ಪ್ರದರ್ಶನ ನೀಡಿದರೂ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ರೋಹಿತ್ ಶರ್ಮಾ ತಂಡಕ್ಕೆ ಬಂದರೆ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಋತುರಾಜ್ ಗಾಯಕ್ ವಾಡ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಬೌಲರ್ ಗಳ ಪೈಕಿ ಜಸ್ಪ್ರೀತ್ ಬುಮ್ರಾ ಪುನರಾಗಮನವಾದರೆ ಹರ್ಷಲ್ ಪಟೇಲ್ ಹೊರ ನಡೆಯಬೇಕಾಗುತ್ತದೆ. ಟಿ20 ವಿಶ್ವಕಪ್ ನಲ್ಲಿ ಈ ಪ್ರತಿಭಾವಂತರಿಗೆ ಆಡುವ ಅವಕಾಶ ಸಿಗುವ ಸಾಧ‍್ಯತೆ ಕಡಿಮೆ.