Select Your Language

Notifications

webdunia
webdunia
webdunia
webdunia

ಐಪಿಎಲ್‌ನಲ್ಲಿ ಮುಸ್ತಫಿಜುರ್ ಶ್ರೇಷ್ಟ ಬೌಲರ್: ಮಾಜಿ ಕ್ರಿಕೆಟರುಗಳ ಅಭಿಮತ

ಐಪಿಎಲ್‌ನಲ್ಲಿ ಮುಸ್ತಫಿಜುರ್ ಶ್ರೇಷ್ಟ ಬೌಲರ್: ಮಾಜಿ ಕ್ರಿಕೆಟರುಗಳ ಅಭಿಮತ
ಹೈದರಾಬಾದ್ , ಶನಿವಾರ, 28 ಮೇ 2016 (13:17 IST)
ಬಾಂಗ್ಲಾದೇಶದ ಎಡಗೈ ವೇಗಿ ಮುಸ್ತಫಿಜುರ್ ರಹ್ಮಾನ್ ಗಾಯದಿಂದಾಗಿ ಗುಜರಾತ್ ಲಯನ್ಸ್ ವಿರುದ್ಧ ಐಪಿಎಲ್ ಕ್ವಾಲಿಫೈಯರ್ ಮಿಸ್ ಮಾಡಿಕೊಂಡಿರಬಹುದು. ಆದರೆ ಚುಟುಕು ಓವರುಗಳ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪೇಸ್ ಬೌಲರ್ ಆಗುವ ಹಾದಿಯಲ್ಲಿ ಅವರಿದ್ದಾರೆ.

ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಗಾಯದಿಂದಾಗಿ ಐಪಿಎಲ್‌ನಲ್ಲಿ ಆಡದೇ ಉಳಿದಿರುವ ನಡುವೆ, ಏಕ ದಿನ ಮತ್ತು ಟ್ವೆಂಟಿ 20ಯಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕಗ್ಗಂಟಾಗಿರುವ ಮುಸ್ತಫಿಜುರ್ ಉದಯವನ್ನು ವಿಶ್ವಕ್ರಿಕೆಟ್ ಕಂಡಿದೆ.

ಯಾರ್ಕರ್, ಆಫ್ ಕಟ್ಟರ್ ಅಥವಾ ಪೇಸ್‌ಗಳಲ್ಲಿ ಬದಲಾವಣೆಗಳಿಂದ ಬಾಂಗ್ಲಾ ಯುವಕನ ಬೌಲಿಂಗ್ ಆಡುವುದು ಕಷ್ಟವಾಗಿ ಕಾಣುತ್ತಿದೆ. 
 
 ರಾಷ್ಟ್ರೀಯ ತಂಡಗಳಲ್ಲಿ ಯಶಸ್ವಿಯಾದ ಅನೇಕ ಬೌಲರುಗಳು ಐಪಿಎಲ್‌ನಲ್ಲಿ ಕಠಿಣ ಹಾದಿಯನ್ನು ಕಂಡಿದ್ದಾರೆ. ಡೇಲ್ ಸ್ಟೇನ್, ಟ್ರೆಂಟ್ ಬೌಲ್ಟ್, ಟಿಮ್ ಸೌಥಿ ರಾಷ್ಟ್ರೀಯ ತಂಡಗಳಲ್ಲಿ ಮನೋಜ್ಞ ಪ್ರದರ್ಶನ ನೀಡಿದ್ದರೂ ಐಪಿಎಲ್‌ನಲ್ಲಿ ಮಾತ್ರ ತಿಣುಕಾಡುತ್ತಿದ್ದಾರೆ. ಜೇಮ್ಸ್ ಆಂಡರ್‌ಸನ್ ಅಥವಾ ಸ್ಟೈನ್ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಚುಟುಕು ಓವರುಗಳ ಕ್ರಿಕೆಟ್‌ನಲ್ಲಿ ಮುಸ್ತಫಿಜುರ್ ಶ್ರೇಷ್ಟ ಪೇಸರ್ ಎಂದು ಪಾಕ್ ಮಾಜಿ ನಾಯಕ ರಮೀಜ್ ರಾಜಾ ಹೇಳಿದ್ದಾರೆ.
 
ಆಫ್ಘಾನಿಸ್ತಾನ ಬೌಲಿಂಗ್ ಕೋಚ್ ಮನೋಜ್ ಪ್ರಭಾಕರ್ ಕೂಡ ಅವರ ಮಾತಿಗೆ ಸಮ್ಮತಿಸಿದ್ದಾರೆ.  ಮುಸ್ತಫಿಜುರ್ ತಮ್ಮ ಉಚ್ಛ್ರಾಯ ಕಾಲದಲ್ಲಿದ್ದು ಕಟ್ಟರ್‌ಗಳನ್ನು ವೇಗವಾಗಿ ಬೌಲ್ ಮಾಡುತ್ತಾರೆ ಮತ್ತು ಇನ್ನೂ ಅದೇ ಗತಿಯಲ್ಲಿ ಕೆಲವು ಬೌಲಿಂಗ್ ಬದಲಾವಣೆಗಳನ್ನು ಮಾಡುತ್ತಾರೆ ಎಂದು ಪ್ರಭಾಕರ್ ಹೇಳಿದರು. 15 ಪಂದ್ಯಗಳಲ್ಲಿ ಮುಸ್ತಫಿಜುರ್ 16 ವಿಕೆಟ್‌ಗಳಲ್ಲಿ ಕೆಲವು ನಿರ್ಣಾಯಕ ಹಂತಗಳಲ್ಲಿ ದಕ್ಕಿದ್ದು, ಆಟದ ದಿಕ್ಕನ್ನು ಬದಲಿಸಿದವು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವೀಣ್ ಕುಮಾರ್‌ಗೆ ವಾರ್ನರ್ ಮೇಲೆ ಕೋಪಬಂದಿದ್ದೇಕೆ?