ನವದೆಹಲಿ: ಲಯನ್ಸ್ ಬೌಲರ್ ಪ್ರವೀಣ್ ಕುಮಾರ್ ಕೆಲವು ಬಾರಿ ಮೈದಾನದಲ್ಲಿ ತಮ್ಮ ಕೋಪತಾಪ ಪ್ರದರ್ಶಿಸಿ ತೊಂದರೆಗೆ ಸಿಕ್ಕಿಬಿದ್ದಿದ್ದರು. ಇಂತಹ ಎರಡು ನಿಮಿಷದ ಕೋಪದ ಘಟನೆಗಳು ಮರುಕಳಿಸದಂತೆ ತಾವು ಪ್ರಯತ್ನಿಸುತ್ತಿರುವ ಕುರಿತು ಅವರು ಹೇಳಿದ್ದರು. ಆದರೆ ಸನ್ ರೈಸರ್ಸ್ 17ನೇ ಓವರಿನಲ್ಲಿ ಪ್ರವೀಣ್ ಕುಮಾರ್ ಸಹನೆ ಕಳೆದುಕೊಂಡಿದ್ದರು.
ಬಿಪುಲ್ ಶರ್ಮಾ ಅವರ ಎಸೆತಕ್ಕೆ ಸಿಕ್ಸರ್ ಸಿಡಿಸಿದ್ದರು. ಬಳಿಕ ಇನ್ನೊಂದು ಎಸೆತದಲ್ಲಿ ಬ್ಯಾಟ್ ತುದಿಗೆ ಚೆಂಡು ತಾಗಿ ಪ್ರವೀಣ್ ಕುಮಾರ್ ತಲೆಯ ಮೇಲೆ ಸಾಗಿ ದೂರದಲ್ಲಿ ಬಿದ್ದಿತ್ತು. ವಾರ್ನರ್ ಬ್ಯಾಟಿಂಗ್ ಆಡುವಾಗ ಪ್ರವೀಣ್ ಯಾರ್ಕರ್ ಎಸೆದರು. ಆಗ ಎಡಕ್ಕೆ ಹಾರಿದ ಪ್ರವೀಣ್ ಚೆಂಡನ್ನು ತಡೆದು ಸಿಂಗಲ್ ಓಡುವುದನ್ನು ತಪ್ಪಿಸಿದ್ದರು.
ಬಳಿಕ ಬ್ಯಾಟ್ಸ್‌ಮನ್ ತುದಿಗೆ ಚೆಂಡನ್ನು ಎಸೆಯುವಂತೆ ನಟಿಸಿದರು. ಆ ಸಂದರ್ಭದಲ್ಲಿ ವಾರ್ನರ್ ಏನಾದರೂ ಹೇಳಿದ್ದಾರೆಂಬುದು ಸ್ಪಷ್ಟವಾಗಿಲ್ಲ. ಅಥವಾ ವಾರ್ನರ್ ಮುಖಭಾವ ಕಂಡು ಪ್ರವೀಣ್‌ಗೆ ಕೋಪ ಬಂದಿರಬಹುದು. ಪ್ರವೀಣ್ ವಾರ್ನರ್ ಅವರತ್ತ ಏನು, ಏನು ಎಂದು ಕೇಳುತ್ತಾ ಧಾವಿಸಿದರು. ಬೌಲರು ಮತ್ತು ಬ್ಯಾಟ್ಸ್‌ಮನ್ ನಡುವೆ ಅಂತರ ಕಡಿಮೆಯಾಗುತ್ತಿದ್ದಂತೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅಡ್ಡ ಬಂದು ಪ್ರವೀಣ್ ಅವರ ಭುಜದ ಮೇಲೆ ಕೈಹಾಕಿ ಸಮಾಧಾನಪಡಿಸಿ ದೂರ ಕರೆದುಕೊಂಡು ಹೋದರು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.