Select Your Language

Notifications

webdunia
webdunia
webdunia
webdunia

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20ಗೆ ಮುಸ್ತಫಿಜುರ್ ರೆಹ್ಮಾನ್ ಆಯ್ಕೆ

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20ಗೆ ಮುಸ್ತಫಿಜುರ್ ರೆಹ್ಮಾನ್ ಆಯ್ಕೆ
ಢಾಕಾ , ಶನಿವಾರ, 4 ಜುಲೈ 2015 (20:35 IST)
ಬಾಂಗ್ಲಾದೇಶದ ಮನೋಜ್ಞ ಬೌಲರ್ ಮುಸ್ತಫಿಜುರ್ ರಹಮಾನ್ ಕುರಿತು ಅಷ್ಟೊಂದು ಕಳವಳ, ಗಲಿಬಿಲಿ ಏನು ಎನ್ನುವುದು ದಕ್ಷಿಣ ಆಫ್ರಿಕಾಕ್ಕೆ ತನ್ನ ಆರಂಭದ ಪ್ರವಾಸದ ಪಂದ್ಯದಲ್ಲಿ ಗೊತ್ತಾಗಲಿದೆ.  ಮುಸ್ತಫಿಜುರ್ 19 ವರ್ಷದ ಎಡಗೈ ವೇಗಿಯಾಗಿದ್ದು, ತನ್ನ ಅಜ್ಞಾತ ಸಾಮರ್ಥ್ಯ ಮತ್ತು ಆಫ್ ಕಟರ್ ಬಳಸಿಕೊಂಡು ಭಾರತದ ವಿರುದ್ಧ 3 ಏಕದಿನ ಪಂದ್ಯಗಳಲ್ಲಿ 13 ದಾಖಲೆಯ ವಿಕೆಟ್ ಕಬಳಿಸಿದ್ದರು.
 
 ಅವರು ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶವನ್ನು ಕಳೆದ ತಿಂಗಳು ಮಾಡಿದ್ದು, ಎರಡು ಟ್ವೆಂಟಿ 20 ಪಂದ್ಯಗಳು, ಮೂರು ಏಕದಿನ ಮತ್ತು ಎರಡು ಟೆಸ್ಟ್‌ಗಳಿಗೆ ಆಯ್ಕೆಯಾಗಿದ್ದಾರೆ. 
 
 ಭಾರತದ ವಿರುದ್ಧ ಪಂದ್ಯವಾಡುವಾಗ ನಾನು ಅವರನ್ನು ನೋಡಿದ್ದೆ. ಆದರೆ ಅಷ್ಟೊಂದು ಸಮೀಪದಿಂದ ಅವರನ್ನು ನೋಡಿಲ್ಲ. ಆದರೆ ಅವರ ಬೌಲಿಂಗ್ ದಾಳಿಯನ್ನು ಭಾರತ ಅಷ್ಟೊಂದು ಚೆನ್ನಾಗಿ ಎದುರಿಸಲಿಲ್ಲ ಎನ್ನುವುದೂ ತಿಳಿಯಿತು. ನಾವು ಅದಕ್ಕಾಗಿ ಬದಲಾವಣೆಗಳನ್ನು ಮಾಡುತ್ತೇವೆ ಎಂದು ದಕ್ಷಿಣ ಆಫ್ರಿಕಾ ಟಿ20 ನಾಯಕ ಪ್ಲೆಸಿಸ್ ಹೇಳಿದರು. 
ಬಾಂಗ್ಲಾದೇಶದ ಸ್ಪಿನ್‌ನಿಂದ ಪೇಸ್ ಕಡೆ ಗಮನ ಬದಲಾವಣೆಯು ದಕ್ಷಿಣ ಆಫ್ರಿಕಾವನ್ನು ಮೊದಲ ಬಾರಿಗೆ ಸರಣಿಯಲ್ಲಿ ಗೆಲ್ಲುತ್ತೇವೆಂಬ ಭಾವನೆ ಹೊಂದಿದೆ.

Share this Story:

Follow Webdunia kannada