ಬಾಂಗ್ಲಾದೇಶದ ಬೌಲಿಂಗ್ ಪ್ರತಿಭೆ ಮುಸ್ತಫಿಜುರ್ ರೆಹ್ಮಾನ್ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾದ್ದರಿಂದ ಸರಣಿಯ ಉಳಿದ ಪಂದ್ಯಗಳಲ್ಲಿ ಆಡದಿರುವುದು ಏಷ್ಯಾ ಕಪ್ ಅಭಿಯಾನದಲ್ಲಿ ಬಾಂಗ್ಲಾಗೆ ಪೆಟ್ಟು ಬಿದ್ದಂತಾಗಿದೆ. ಅವರಿಗೆ ಬದಲಿಯಾಗಿ ತಮೀಮ್ ಇಕ್ಬಾಲ್ ಅವರನ್ನು ಕರೆಸಲಾಗಿದೆ.
ಮುಸ್ತಫಿಜುರ್ ಅವರ ಗಾಯವನ್ನು ಗ್ರೇಡ್ 1 ಸ್ನಾಯುಸೆಳೆತವೆಂದು ವರ್ಗೀಕರಿಸಲಾಗಿದ್ದು, ವಿಶ್ವ ಟಿ 20 ಸನ್ನಿಹಿತವಾಗಿರುವ ನಡುವೆ, ಮುಸ್ತಫಿಜುರ್ ಅವರನ್ನು ಬಹು ಕಾಲ ಆಡಿಸದೇ ಇರುವ ಸಂಭವವಿಲ್ಲ. ಬಿಸಿಬಿ ಮುಸ್ತಫಿಜುರ್ ಫಿಟ್ನೆಸ್ ನಿರ್ವಹಣೆಗೆ ಅತ್ಯುತ್ತಮ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ.
ಶ್ರೀಲಂಕಾದ 147 ರನ್ ಚೇಸ್‌ನಲ್ಲಿ ಎರಡು ಓವರುಗಳಲ್ಲಿ ಕೇವಲ 9 ರನ್ ನೀಡಿ ಮುಸ್ತಫಿಜುರ್ಶ್ರೀಲಂಕಾ ರನ್ ವೇಗ ನಿಯಂತ್ರಿಸಿದ್ದರು. 20 ವರ್ಷದ ಮುಸ್ತಫಿಜುರ್ ಕಿರು ಓವರುಗಳ ಕ್ರಿಕೆಟ್‌ನಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ವಿರುದ್ಧ ಸ್ವದೇಶದಲ್ಲಿ ನಡೆದ ಸರಣಿಗಳಲ್ಲಿ 26 ವಿಕೆಟ್ ಕಬಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದರು. ಅವುಗಳಲ್ಲಿ ಎರಡು ಬಾರಿ 5 ವಿಕೆಟ್ ಮತ್ತು ಒಂದು ಬಾರಿ 6 ವಿಕೆಟ್ ಕಬಳಿಸಿದ್ದರು.