Publish Date: Sun, 05 Nov 2023 (10:19 IST)
Updated Date: Sun, 05 Nov 2023 (09:20 IST)
ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿಶ್ವಕಪ್ ನಲ್ಲಿ 45 ವಿಕೆಟ್ ಕಬಳಿಸಿ ಜಹೀರ್ ಖಾನ್ ದಾಖಲೆ ಅಳಿಸಿದ್ದರು.
ಮೊಹಮ್ಮದ್ ಶಮಿ ಈಗ ವಿಶ್ವಕಪ್ ನಲ್ಲಿ ಅನುಭವಿ ಬೌಲರ್. ಇದುವರೆಗೆ ತಮ್ಮ ಕರಾರು ವಾಕ್ ದಾಳಿಯಿಂದ ಸಿಂಹ ಸ್ವಪ್ನರಾಗಿ ಕಾಡಿದ್ದಾರೆ. ಅದರಲ್ಲೂ ಅವರು ಬೌಲ್ಡ್ ಮಾಡುವ ಪರಿ ಎದುರಾಳಿಗಳ ಎದೆ ನಡುಗಿಸುತ್ತದೆ.
ಆದರೆ ಇಷ್ಟೆಲ್ಲಾ ವಿಕೆಟ್ ಪಡೆದೂ ಶಮಿ ಇದುವರೆಗೆ ವಿಶ್ವಕಪ್ ನಲ್ಲಿ ಒಬ್ಬನೇ ಒಬ್ಬ ಬ್ಯಾಟಿಗನನ್ನೂ ಎಲ್ ಬಿಡಬ್ಲ್ಯು ಮೂಲಕ ಔಟ್ ಮಾಡಿಲ್ಲ ಎನ್ನುವುದು ವಿಶೇಷ. ಇಂದು ಅವರ ತವರಿನಲ್ಲಿ ಪಂದ್ಯ ನಡೆಯುತ್ತಿದ್ದು ಆ ದಾಖಲೆಯನ್ನೂ ಮಾಡುತ್ತಾರಾ ಕಾದು ನೋಡಬೇಕಿದೆ.