Select Your Language

Notifications

webdunia
webdunia
webdunia
webdunia

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಮಿಥಾಲಿ ರಾಜ್

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಮಿಥಾಲಿ ರಾಜ್
ಪ್ರಾವಿಡೆನ್ಸ್ , ಸೋಮವಾರ, 12 ನವೆಂಬರ್ 2018 (08:58 IST)
ಪ್ರಾವಿಡೆನ್ಸ್: ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯ ಗ್ರೂಪ್ ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ಮಹಿಳಾ ಕ್ರಿಕೆಟ್ ತಂಡ 7 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿ ಸೆಮಿಫೈನಲ್ ಗೆ ಮತ್ತಷ್ಟು ಹತ್ತಿರವಾಗಿದೆ.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 133 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಪೂನಂ ಯಾದವ್ ಮತ್ತು ಹೇಮಲತಾ ತಲಾ 2 ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟ್ ಆರಂಭಿಸಿದ ಭಾರತದ ವನಿತೆಯರು ಉತ್ತಮ ಆರಂಭ ಪಡೆದರು. ಏಕದಿನ ತಂಡದ ನಾಯಕಿ, ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ತಮ್ಮ ಅನುಭವದ ಆಟವಾಡಿ ಅರ್ಧ ಶತಕ (56 ರನ್) ಸಿಡಿಸಿದರು. ಅವರಿಗೆ ಹೊಡೆ ಬಡಿಯ ಆಟಗಾರ್ತಿ ಸ್ಮೃತಿ ಮಂಧನ ಜತೆಯಾದರು. ಸ್ಮೃತಿ 26 ರನ್ ಗಳಿಸಿದರು. ಮೊದಲ ವಿಕೆಟ್ ಗೆ 73 ರನ್ ಗಳ ಜತೆಯಾಟವಾಡಿದ ಈ ಜೋಡಿ ತಂಡವನ್ನು ಸುರಕ್ಷಿತ ಗುರಿಗೆ ತಲುಪಿಸಿತು. ಬಳಿಕ ಕೊನೆಯಲ್ಲಿ ಬಂದ ನಾಯಕಿ ಹರ್ಮನ್ ಪ್ರೀತ್ ಔಟಾಗದೆ 14 ರನ್ ಗಳಿಸಿದರೆ ಕನ್ನಡತಿ ವೇದಾ ಕೃಷ್ಣಮೂರ್ತಿ ಔಟಾಗದೇ 8 ರನ್ ಗಳಿಸಿ ಗೆಲುವು ಕೊಡಿಸಿದರು. ಭಾರತ 19 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನದ ದಡ ಮುಟ್ಟಿತು.  ಇದರೊಂದಿಗೆ ಗ್ರೂಪ್ ಹಂತದಲ್ಲಿ ಎರಡೂ ಪಂದ್ಯ ಗೆದ್ದ ಭಾರತೀಯರು ಸೆಮಿಫೈನಲ್ ಸನಿಹ ಬಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ವೆಸ್ಟ್ ಇಂಡೀಸ್ ಟಿ20: ಐಪಿಎಲ್ ನಂತೆ ಆಡಿದ ಟೀಂ ಇಂಡಿಯಾ