Publish Date: Mon, 26 Jul 2021 (10:58 IST)
Updated Date: Mon, 26 Jul 2021 (10:59 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನ ಮಹಿಳೆಯರ ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ಗೆದ್ದು ತಂದ ಮೀರಾಬಾಯಿ ಚಾನು ಇಂದು ತವರಿಗೆ ತಲುಪಲಿದ್ದಾರೆ.
ಈಗಾಗಲೇ ಮೀರಾಬಾಯಿ ಟೋಕಿಯೋದಿಂದ ಹೊರಟಿದ್ದು, ಇಂದು ಸಂಜೆ ತವರಿಗೆ ತಲುಪುವ ನಿರೀಕ್ಷೆಯಿದೆ. ತವರಿಗೆ ಹೊರಟಿರುವುದಾಗಿ ಮೀರಾಬಾಯಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಇನ್ನು, ಭಾರತಕ್ಕೆ ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಮೊದಲ ಬಾರಿಗೆ ಬೆಳ್ಳಿ ಗೆದ್ದುಕೊಟ್ಟ ಮೀರಾಬಾಯಿಗೆ ಭರ್ಜರಿ ಸ್ವಾಗತ ನಿರೀಕ್ಷಿಸಲಾಗಿದೆ.