Select Your Language

Notifications

webdunia
webdunia
webdunia
webdunia

ದಾಖಲೆಗಳ ಮೇಲೆ ದಾಖಲೆ ಬರೆದ ಮಂದಾನಾ ಪಡೆ: ದಾಖಲೆಯ 305 ರನ್‌ಗಳಿಂದ ಗೆದ್ದು ಭಾರತ ಕ್ಲೀನ್‌ಸ್ವೀಪ್‌

Captain Smriti Mandana

Sampriya

ರಾಜ್‌ಕೋಟ್‌ , ಬುಧವಾರ, 15 ಜನವರಿ 2025 (18:14 IST)
Photo Courtesy X
ರಾಜ್‌ಕೋಟ್‌: ಐರ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ದಾಖಲೆಯ 305 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ.

ನಾಯಕಿ ಸ್ಮೃತಿ ಮಂದಾನಾ (135), ಪ್ರತೀಕಾ ರಾವಲ್ (154) ಅವರ ಶತಕದ ನೆರವಿನಿಂದ ಭಾರತದ ವನಿತೆಯರು ನೀಡಿದ್ದ ಬೃಹತ್‌ ಮೊತ್ತವನ್ನು ಕಲೆ ಹಾಕುವಲ್ಲಿ ಐರ್ಲೆಂಡ್‌ ತಂಡ ವಿಫಲವಾಗಿದೆ.  

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ನಾಯಕಿ ಸ್ಮೃತಿ, ರಾವಲ್ ಅವರ ಶತಕಗಳ ನೆರವಿನಿಂದ 435 ರನ್‌ ಗಳಿಸಿ ದಾಖಲೆ ಬರೆದಿತ್ತು. ಮಂದಾನ ಮತ್ತು ರಾವಲ್‌ ಮೊದಲ ವಿಕೆಟ್‌ಗೆ ದಾಖಲೆಯ 233 ರನ್‌ ಜೊತೆಯಾಟವಾಡಿದ್ದರು.

ಅನುಭವಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ ಅವರು ವೇಗದ ಶತಕ ದಾಖಲಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ಹೊಸ ದಾಖಲೆ ಬರೆದರು. ಅವರು ಕೇವಲ 70 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿ ಹರ್ಮನ್‌ಪ್ರೀತ್‌ ಕೌರ್‌ ಅವರ ದಾಖಲೆ ಮುರಿದರು.

ಬೃಹತ್‌ ಗುರಿ ಬೆನ್ನಟ್ಟಲು ವಿಫಲವಾದ ಐರ್ಲೆಂಡ್‌ ತಂಡವು ಕೇವಲ 131 ರನ್‌ ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ದೀಪ್ತಿ ಶರ್ಮಾ ಮೂರು ವಿಕೆಟ್‌ ಪಡೆದರು. ಮೂರು ಪಂದ್ಯಗಳ ಸರಣಿಯನ್ನು 3-0 ಯಿಂದ ಭಾರತ ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs IRE ODI: ODIನಲ್ಲಿ ಪುರುಷರ ತಂಡವನ್ನೂ ಹಿಂದಿಕ್ಕಿ ಬೃಹತ್ ಮೊತ್ತ ಪೇರಿಸಿದ ಭಾರತ ಮಹಿಳಾ ತಂಡ