ಚಿತ್ತಗಾಂಗ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಟೀಂ ಇಂಡಿಯಾ ಬಿಗಿ ಹಿಡಿತದಲ್ಲಿದೆ.
ಇಂದಿನ ದಿನದಂತ್ಯಕ್ಕೆ ಬಾಂಗ್ಲಾ ಮೊದಲ ಇನಿಂಗ್ಸ್ ನಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ ಸಂಕಷ್ಟದಲ್ಲಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 404 ಕ್ಕೆ ಆಲೌಟ್ ಆಗಿತ್ತು. ರವಿಚಂದ್ರನ್ ಅಶ್ವಿನ್ ಅರ್ಧಶತಕ (58) ಮತ್ತು ಕುಲದೀಪ್ ಯಾದವ್ 40 ರನ್ ಗಳ ಕೊಡುಗೆಯಿಂದ ಭಾರತ 400 ರ ಗಡಿ ತಲುಪಲು ಸಾಧ್ಯವಾಯಿತು.
ಈ ಮೊತ್ತ ಬೆನ್ನತ್ತಿರುವ ಬಾಂಗ್ಲಾಗೆ ಬೌಲಿಂಗ್ ನಲ್ಲೂ ಕುಲದೀಪ್ ಯಾದವ್ ಕಾಡಿದರು. ಇದುವರೆಗೆ ಕುಲದೀಪ್ 4 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಬಹಳ ದಿನಗಳ ನಂತರ ಟೆಸ್ಟ್ ತಂಡಕ್ಕೆ ವಾಪಸ್ ಆಗಿರುವ ಅವರು ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಉಳಿದಂತೆ ಮೊಹಮ್ಮದ್ ಸಿರಾಜ್ 3, ಉಮೇಶ್ ಯಾದವ್ 1 ವಿಕೆಟ್ ಕಬಳಿಸಿದ್ದಾರೆ. ಬಾಂಗ್ಲಾ ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 271 ರನ್ ಗಳಿಸಬೇಕಿದೆ.