Publish Date: Thu, 15 Dec 2022 (11:27 IST)
Updated Date: Thu, 15 Dec 2022 (11:31 IST)
ಚಿತ್ತಗಾಂಗ್: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಉತ್ತಮ ಮೊತ್ತದತ್ತ ಹೆಜ್ಜೆ ಹಾಕಿದೆ.
ಎರಡನೇ ದಿನದ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ. ರವಿಚಂದ್ರನ್ ಅಶ್ವಿನ್ 40, ಕುಲದೀಪ್ ಯಾದವ್ 21 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನಿನ್ನೆ ಅಜೇಯರಾಗುಳಿದಿದ್ದ ಶ್ರೇಯಸ್ ಅಯ್ಯರ್ ಇಂದು ನಾಲ್ಕು ರನ್ ಸೇರಿಸುವಲ್ಲಿ ಔಟಾದರು. 86 ರನ್ ಗೆ ಔಟಾದ ಅವರು ಶತಕ ಪೂರೈಸಲಾಗದೇ ನಿರಾಸೆ ಅನುಭವಿಸಿದರು. ಇದೀಗ ಟೀಂ ಇಂಡಿಯಾ 400 ರ ಮೊತ್ತದತ್ತ ಗುರಿ ಇಟ್ಟಿದೆ.