Publish Date: Wed, 14 Dec 2022 (09:54 IST)
Updated Date: Wed, 14 Dec 2022 (09:57 IST)
ಚಿತ್ತಗಾಂಗ್: ಹುಟ್ಟುಹಬ್ಬದ ದಿನವೇ ಕುಲದೀಪ್ ಯಾದವ್ ಗೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಭರ್ಜರಿ ಗಿಫ್ಟ್ ಕೊಟ್ಟಿದೆ.
ಇಷ್ಟು ದಿನ ಟೆಸ್ಟ್ ಕ್ರಿಕೆಟ್ ನಲ್ಲಿ ಕಡೆಗಣಿಸಲ್ಪಟ್ಟಿದ್ದ ಕುಲದೀಪ್ ಯಾದವ್ ಗೆ ಇಂದಿನಿಂದ ಆರಂಭವಾಗಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವಕಾಶ ಸಿಕ್ಕಿದೆ.
ಇಂದು ಜನ್ಮದಿನದಂದೇ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕುಲದೀಪ್ ಯಾದವ್ ಕಮ್ ಬ್ಯಾಕ್ ಮಾಡಿರುವುದು ಅವರಿಗೆ ಸಿಕ್ಕ ಭರ್ಜರಿ ಗಿಫ್ಟ್ ಎಂದೇ ಹೇಳಬಹುದು. ಟೀಂ ಇಂಡಿಯಾ ಈ ಪಂದ್ಯದಲ್ಲಿ ಮೂವರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿದಿದೆ.