Select Your Language

Notifications

webdunia
webdunia
webdunia
webdunia

ಇಶಾನ್ ಕಿಶನ್ ದ್ವಿಶತಕದಿಂದ ಶಿಖರ್ ಧವನ್ ಗೆ ಗೇಟ್ ಪಾಸ್?!

ಇಶಾನ್ ಕಿಶನ್ ದ್ವಿಶತಕದಿಂದ ಶಿಖರ್ ಧವನ್ ಗೆ ಗೇಟ್ ಪಾಸ್?!
ಮುಂಬೈ , ಭಾನುವಾರ, 11 ಡಿಸೆಂಬರ್ 2022 (09:40 IST)
Photo Courtesy: Twitter
ಮುಂಬೈ: ಬಾಂಗ್ಲಾದೇಶ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಇಶಾನ್ ಕಿಶನ್ ಈಗ ಆಯ್ಕೆಗಾರರಿಗೆ ಪ್ರಬಲ ಸಂದೇಶ ನೀಡಿದ್ದಾರೆ.

ಇಷ್ಟು ದಿನ ಶಿಖರ್ ಧವನ್, ರೋಹಿತ್ ಶರ್ಮಾ ಇದ್ದರೆ ಇಶಾನ್ ಕಿಶನ್ ಗೆ ತಂಡದಲ್ಲಿ ಸ್ಥಾನ ಸಿಗುತ್ತಿರಲಿಲ್ಲ. ಆದರೆ ಈಗ ಇಶಾನ್ ದ್ವಿಶತಕ ಸಿಡಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಹೀಗಾಗಿ ಮುಂದೆ ಏಕದಿನ ಪಂದ್ಯಗಳಲ್ಲಿ ಇಶಾನ್ ಕಿಶನ್ ಆರಂಭಿಕರಾದರೆ ಶಿಖರ್ ಧವನ್ ಹೊರಗುಳಿಯಬೇಕಾದೀತು. ಹೀಗಾಗಿ ನೆಟ್ಟಿಗರು ಧವನ್ ಗೆ ಇನ್ನು ಗೇಟ್ ಪಾಸ್ ಎಂದು ವಿವಿಧ ಮೆಮೆಗಳ ಮೂಲಕ ಟ್ರೋಲ್ ಮಾಡಿದ್ದಾರೆ. ಹಾಗಿದ್ದರೂ ಭಾರತ ತಂಡದಲ್ಲಿ ರೊಟೇಷನ್ ಪದ್ಧತಿ ಜಾರಿಯಲ್ಲಿರುವುದರಿಂದ ಧವನ್ ಗೆ ಅವಕಾಶ ಸಿಗಬಹುದು. ಆದರೆ ಏಕದಿನ ವಿಶ್ವಕಪ್ ದೃಷ್ಟಿಯಿಂದ ಇಶಾನ್ ತಮ್ಮ ಫಾರ್ಮ್ ಮುಂದುವರಿಸಿದರೆ ಧವನ್ ಅವಕಾಶ ಕಳೆದುಕೊಳ್ಳಬೇಕಾದೀತು.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ದ್ರಾವಿಡ್ ಕೋಚ್ ಆಗಿ ಟೀಂ ಇಂಡಿಯಾ ಸೋಲಿನ ಲಿಸ್ಟ್