Publish Date: Fri, 09 Dec 2022 (08:30 IST)
Updated Date: Fri, 09 Dec 2022 (08:56 IST)
ಢಾಕಾ: ಬಾಂಗ್ಲಾದೇಶ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.
ಖಾಯಂ ನಾಯಕ ರೋಹಿತ್ ಶರ್ಮಾ ಎರಡನೇ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಇದರಿಂದಾಗಿ ಅವರು ಎಂಟನೇ ಕ್ರಮಾಂಕದಲ್ಲಿ ಆಡಲಿಳಿದರು.
ಇದೀಗ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಮರಳಿರುವುದರಿಂದ ಕೆಎಲ್ ರಾಹುಲ್ ನಾಯಕರಾಗಲಿದ್ದಾರೆ. ಟೆಸ್ಟ್ ಸರಣಿ ವೇಳೆ ರೋಹಿತ್ ತಂಡಕ್ಕೆ ಮರಳುವುದು ಅನುಮಾನವಾಗಿದೆ. ಹಾಗಿದ್ದಲ್ಲಿ ರಾಹುಲ್ ಟೆಸ್ಟ್ ಸರಣಿಯಲ್ಲೂ ತಂಡದ ನಾಯಕತ್ವ ವಹಿಸಲಿದ್ದಾರೆ.