Publish Date: Wed, 07 Dec 2022 (08:40 IST)
Updated Date: Wed, 07 Dec 2022 (08:55 IST)
ಢಾಕಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದು ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ವೈಯಕ್ತಿಕ ದಾಖಲೆಗಾಗಿ ಪೈಪೋಟಿ ನಡೆಯಲಿದೆ.
ಬಾಂಗ್ಲಾದೇಶ ವಿರುದ್ಧ ಏಕದಿನ ಪಂದ್ಯಗಳಲ್ಲಿ ಹೆಚ್ಚು ಅತೀ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಸದ್ಯಕ್ಕೆ ವಿರಾಟ್ ಕೊಹ್ಲಿ ಮುಂದಿದ್ದಾರೆ. ಅವರು 13 ಪಂದ್ಯಗಳಿಂದ 689 ರನ್ ಗಳಿಸಿದ್ದಾರೆ. ಆದರೆ ರೋಹಿತ್ ಶರ್ಮಾ ಕೂಡಾ ಕೊಹ್ಲಿಯ ಹಿಂದೆಯೇ ಇದ್ದಾರೆ.
ರೋಹಿತ್ 14 ಪಂದ್ಯಗಳಿಂದ 687 ರನ್ ಗಳಿಸಿದ್ದಾರೆ. ಇದೀಗ ಇಬ್ಬರ ನಡುವೆ ಕೇವಲ ಮೂರು ರನ್ ಗಳ ಅಂತರವಿದೆ. ಹೀಗಾಗಿ ಈ ಸರಣಿಯಲ್ಲಿ ಗರಿಷ್ಠ ರನ್ ಸ್ಥಾನಕ್ಕಾಗಿ ಇಬ್ಬರ ನಡುವೆ ಪೈಪೋಟಿ ನಡೆಯಲಿದೆ.